ADVERTISEMENT

ಮುಸ್ಲಿಂ ಬಾಲಕಿಗೂ 'ಕುಮಾರಿ ಪೂಜೆ'

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 6:29 IST
Last Updated 9 ಅಕ್ಟೋಬರ್ 2019, 6:29 IST
ಕುಮಾರಿ ಪೂಜೆಯಲ್ಲಿ ಇಜ್ನಾ ಅಲಿ
ಕುಮಾರಿ ಪೂಜೆಯಲ್ಲಿ ಇಜ್ನಾ ಅಲಿ   

ಬೆಂಗಳೂರು:ಹಾರ್ಮನಿ ವೆಲ್ಫೇರ್ ಆ್ಯಂಡ್ ಕಲ್ಚರಲ್ ಅಸೋಸಿಯೇಷನ್ (ಎಚ್‌ಡಬ್ಲ್ಯುಸಿಎ) ಆಯೋಜಿಸಿದ್ದ ಕುಮಾರಿ ಪೂಜೆಯಲ್ಲಿ 50 ಬಾಲಕಿಯರು ಭಾಗವಹಿಸಿದ್ದರು. ವಿಶೇಷವೆಂದರೆ ಇಜ್ನಾ ಅಲಿ ಎಂಬ ಮುಸ್ಲಿಂ ಬಾಲಕಿಯೂ ಇದರಲ್ಲಿಭಾಗಿಯಾಗಿದ್ದಳು.

ಸಂಪ್ರದಾಯದ ಪ್ರಕಾರ ಬ್ರಾಹ್ಮಣ ಸಮುದಾಯದ ಬಾಲಕಿಯರಿಗೆ ಮಾತ್ರ ಕುಮಾರಿ ಪೂಜೆ ನಡೆಯುತ್ತದೆ. ಆದರೆ ಈ ಬಾರಿ ಅನ್ಯ ಧರ್ಮದ ಬಾಲಕಿಗೂ ಕುಮಾರಿ ಪೂಜೆ ಮಾಡುವ ಮೂಲಕ ಎಚ್‌ಡಬ್ಲ್ಯುಸಿಎ ಸಮಾಜಕ್ಕೆ ಸಮಾನತೆಯ ಸಂದೇಶ ಸಾರಿದೆ.

ಧರ್ಮ ಮತ್ತು ಧಾರ್ಮಿಕ ಕಟ್ಟುಪಾಡುಗಳನ್ನು ಮೀರುವ ಕಾರ್ಯಕ್ರಮವನ್ನು ಎಚ್‌ಡಬ್ಲ್ಯುಸಿಎ ಆಯೋಜಿಸುತ್ತಿದೆ. ಲಿಂಗ ತಾರತಮ್ಯ , ಪುರುಷ ಪ್ರಾಧಾನ್ಯವಿರುವ ಈ ಸಮಾಜದಲ್ಲಿ ಹೆಣ್ಣು ಮಕ್ಕಳು ಹಿಂದುಳಿದು ಬಿಡುತ್ತಾರೆ. ಕಾಶ್ಮೀರದಲ್ಲಿ ಮುಸ್ಲಿಂ ಅಂಬಿಗನ ಮಗಳಿಗೆ ಸ್ವಾಮಿ ವಿವೇಕಾನಂದರು ಕುಮಾರಿ ಪೂಜೆ ಮಾಡಿದ್ದರು. ಸಮಾಜದಲ್ಲಿ ಹೆಣ್ಣು ಮಕ್ಕಳ ಸ್ಥಾನವನ್ನು ಸುಧಾರಿಸಲು ಮತ್ತು ಧಾರ್ಮಿಕ ಸಾಮರಸ್ಯಕ್ಕೆ ಇದು ದಾರಿಯಾಯಿತು ಎಂದು ಪ್ರೊವಿಡೆಂಟ್ ಹಾರ್ಮನಿ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವ್ಯವಸ್ಥಾಪಕ ಸಮಿತಿ ಸದಸ್ಯ ಮಯೂಕ್ ಪಾತ್ರಾ ಹೇಳಿದ್ದಾರೆ.

ADVERTISEMENT

ಇದೇ ರೀತಿಯಲ್ಲಿ ಸ್ಥಳೀಯ ಅನಾಥ ಮಕ್ಕಳಲ್ಲಿನ ಕೌಶಲವನ್ನು ಸುಧಾರಿಸುವ ಮೂಲಕ ಅವರಿಗೆ ಉದ್ಯೋಗ ಸಿಗುತಂತೆ ಮಾಡುವ ಕಾರ್ಯವನ್ನೂ ಎಚ್‌ಡಬ್ಲ್ಯುಸಿಎ ಮಾಡುತ್ತಿದೆ ಎಂದು ಮಯೂಕ್ ಅವರು ಹೇಳಿದ್ದಾರೆ.

ಏನಿದು ಕುಮಾರಿ ಪೂಜೆ?
10 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ದುರ್ಗಾಷ್ಟಮಿ ದಿನ ಪೂಜೆ ಮಾಡಲಾಗುತ್ತದೆ. ಈ ಹೆಣ್ಣು ಮಕ್ಕಳನ್ನು ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಸರಸ್ವತಿ ರೂಪದಲ್ಲಿ ಪೂಜಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.