ಬೆಂಗಳೂರು: ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯು ‘ಕುವೆಂಪು ಬ್ರೈಡ್ ಇನ್ ದಿ ಹಿಲ್ಸ್’ ಶೀರ್ಷಿಕೆಯಡಿ ಇಂಗ್ಲಿಷ್ ಭಾಷೆಗೆ ಅನುವಾದಗೊಂಡಿದೆ.
ಪೆಂಗ್ವಿನ್ ಸಂಸ್ಥೆಯು ಇದನ್ನು ಪ್ರಕಟಿಸಿದೆ. ವನಮಾಲಾ ವಿಶ್ವನಾಥ ಅವರು ಅನುವಾದಿಸಿದ್ದಾರೆ. ಈಗಾಗಲೇ ಆನ್‌ಲೈನ್ ವೇದಿಕೆಯಲ್ಲಿ ಕೃತಿಯ ಮಾರಾಟ ಪ್ರಾರಂಭವಾಗಿದೆ. ಅನುವಾದಿತ ಕೃತಿಯು 816 ಪುಟಗಳನ್ನು ಹೊಂದಿದ್ದು, ₹ 799 ದರ ನಿಗದಿಪಡಿಸಲಾಗಿದೆ.
‘ಕನ್ನಡದ ಅತ್ಯಂತ ಮಹತ್ವದ ಕಾದಂಬರಿಯಾದ ‘ಮಲೆಗಳಲ್ಲಿ ಮದುಮಗಳು’ ಅನುವಾದ ಸುಲಭವಾಗಿರಲಿಲ್ಲ. ಎರಡೂವರೆ ವರ್ಷದಲ್ಲಿ ಇದನ್ನು ಅನುವಾದಿಸಿದ್ದು, ಪುಸ್ತಕ ಬಿಡುಗಡೆಗೂ ಮುನ್ನವೇ ಆನ್‌ಲೈನ್ ವೇದಿಕೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ’ ಎಂದು ಲೇಖಕಿ ವನಮಾಲಾ ವಿಶ್ವನಾಥ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.