
ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಎರಡೂ ಟರ್ಮಿನಲ್‌ಗಳಲ್ಲಿ ಹೊಸ ಪಿಕ್‌ಅಪ್ ನಿಯಮ ಜಾರಿಗಳಿಸಲಾಗಿದ್ದರೂ ಕ್ಯಾಬ್‌ಗಳ ಕೊರತೆಯಿಂದ ಪ್ರಯಾಣಿಕರು ಬೇಸರ ಗೊಂಡಿದ್ದಾರೆ.
ಜನವರಿ 5ರಂದು ಹೆಚ್ಚಿನ ಜನರು ಬೆಂಗಳೂರಿಗೆ ವಾಪಸಾಗುತ್ತಿದ್ದ ಕಾರಣ, ಸೋಮವಾರ ಸಂಜೆ ವಿಮಾನ ನಿಲ್ದಾಣದಲ್ಲಿ ಕ್ಯಾಬ್‌ಗಳ ತೀವ್ರ ಕೊರತೆ ಕಂಡು ಬಂತು.
ಕೆಐಎಎಲ್ ವೇಗವಾಗಿ ಬೆಳೆಯುತ್ತಿರುವ ದೇಶದ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದ್ದು, ನಿತ್ಯ ಅಂದಾಜು 1.30 ಲಕ್ಷ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿದೆ. ವಿಮಾನ ನಿಲ್ದಾಣ ರಸ್ತೆ ಮಾರ್ಗದಲ್ಲಿ ಸುಮಾರು ಒಂದು ಲಕ್ಷ ವಾಹನಗಳು ನಿತ್ಯ ಸಂಚರಿಸುತ್ತವೆ
ದೆಹಲಿಯಿಂದ ವಾಪಸಾದ ಶಶಿಕಾಂತ್ ಅವರು ಕ್ಯಾಬ್‌ಗಾಗಿ 40 ರಿಂದ 50 ನಿಮಿಷ ಕಾಯಬೇಕಾಯಿತು. ವಿಮಾನ ನಿಲ್ದಾಣದ ಮೂಲಗಳ ಪ್ರಕಾರ, ಸೋಮವಾರ ಕ್ಯಾಬ್‌ಗಳಿಗೆ ಸರಾಸರಿ ಕಾಯುವ ಸಮಯ 20 ನಿಮಿಷಗಳಷ್ಟಿತ್ತು. ಹಾಗಾಗಿ ಹೊಸ ನಿಯಮಗಳ ಬಗ್ಗೆ ಪ್ರಯಾಣಿಕರು ಅಸಮಾಧಾನಗೊಂಡಿದ್ದಾರೆ.
ಪ್ರಯಾಣಿಕರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿಯೂ ಓಲಾ ಹಾಗೂ ಉಬರ್ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.