
ಪ್ರಜಾವಾಣಿ ವಾರ್ತೆ
ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಸುಮಾರು 150 ವರ್ಷದ ಮರವೊಂದು ಶುಕ್ರವಾರ ಸಂಜೆ ಉರುಳಿ ಬಿದ್ದಿದೆ.
ಫೈಕಸ್ ವಿರೇನ್ಸ್ ಪ್ರಭೇದದ ಮರವು ಲಾಲ್‌ಬಾಗ್ ಉದ್ಯಾನದಲ್ಲಿತ್ತು. ‘ವಿ’ ಆಕಾರದಲ್ಲಿ ಎರಡು ಬೃಹತ್ ರೆಂಬೆಗಳು ಬೆಳೆದಿದ್ದು, ಮಧ್ಯೆ ಟೊಳ್ಳಾಗಿತ್ತು. ಮಳೆ ಬಂದಾಗ ಭಾರ ತಡೆಯಲಾರದೇ ಟೊಳ್ಳಾಗಿದ್ದ ಜಾಗವು ಇಬ್ಭಾಗವಾಗಿ ಬಿದ್ದಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಜಗದೀಶ ಮಾಹಿತಿ ನೀಡಿದರು.
ಫೈಕಸ್ ತಳಿಯಲ್ಲಿ ಆಲ, ಅರಳಿ ಸೇರಿದಂತೆ 200ಕ್ಕೂ ಅಧಿಕ ಪ್ರಭೇದಗಳಿವೆ. ಅದರಲ್ಲಿ ವಿರೇನ್ಸ್ (ಕರಿ ಬಸರಿ) ಕೂಡಾ ಒಂದು. ಸಣ್ಣ ಹಣ್ಣುಗಳನ್ನು ಬಿಡುವ ಈ ಮರ ಹಕ್ಕಿಗಳಿಗೆ ಅನುಕೂಲಕರವಾಗಿತ್ತು. ಮರವನ್ನು ಶನಿವಾರ ತೆರವುಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಯಾರಿಗೂ ಯಾವುದೇ ಅಪಾಯ ಉಂಟಾಗಿಲ್ಲ ಎಂದು ಪ್ರತ್ಯಕ್ಷದರ್ಶಿ, ವಾಯು ವಿಹಾರಿ ಅನಿಲ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.