ADVERTISEMENT

ಬೆಂಗಳೂರು | ಗಣೇಶ ಮೂರ್ತಿಗಳ ವಿಸರ್ಜನೆ: ಎರಡು ದಿನ ಮದ್ಯ ಮಾರಾಟ ನಿಷೇಧ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 15:55 IST
Last Updated 29 ಆಗಸ್ಟ್ 2025, 15:55 IST
<div class="paragraphs"><p>– ಪ್ರಜಾವಾಣಿ ಚಿತ್ರ</p></div>
   

– ಪ್ರಜಾವಾಣಿ ಚಿತ್ರ

ಬೆಂಗಳೂರು: ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮದ ಸಂಬಂಧ ನಗರದ ಕೆಲವು ಕಡೆ ಆಗಸ್ಟ್ 30 ಮತ್ತು 31ರಂದು ಮದ್ಯ ಮಾರಾಟ ನಿಷೇಧಿಸಿ ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಆದೇಶ ಹೊರಡಿಸಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕೆಲವು ವಿಭಾಗಗಳ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸಿಎಲ್-4 ಮತ್ತು ಸಿಎಲ್-6 ಪರವಾನಗಿ ಹೊರತುಪಡಿಸಿ, ಉಳಿದ ಎಲ್ಲಾ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು, ವೈನ್‌ಶಾಪ್‌ಗಳು, ಪಬ್‌ಗಳು, ಎಂ.ಎಸ್.ಐ.ಎಲ್. ಮಳಿಗೆಗೆಳು ಸೇರಿ ಎಲ್ಲಾ ರೀತಿಯ ಮದ್ಯ ಮಾರಾಟ ಮಾಡುವ ಅಂಗಡಿ ಮುಚ್ಚಲು ಆದೇಶಿಸಿದ್ದಾರೆ. ರೆಸ್ಟೋರೆಂಟ್ ಹಾಗೂ ಹೋಟೆಲ್‌ಗಳಲ್ಲಿ ಆಹಾರ ಸೇವೆಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ.

ADVERTISEMENT

ಎಲ್ಲೆಲ್ಲಿ ಮದ್ಯ ಮಾರಾಟ ನಿಷೇಧ?: ಆರ್‌.ಟಿ.ನಗರ, ಜೆ.ಸಿ.ನಗರ, ಸಂಜಯ ನಗರ, ಹೆಬ್ಬಾಳ, ಡಿ.ಜಿ.ಹಳ್ಳಿ, ಭಾರತಿನಗರ, ಪುಲಕೇಶಿನಗರ, ಯಲಹಂಕ, ಯಲಹಂಕ ಉಪನಗರ, ಕೊಡಿಗೇಹಳ್ಳಿ, ವಿದ್ಯಾರಣ್ಯಪುರ, ಚಂದ್ರಾ ಲೇಔಟ್‌ ಠಾಣಾ ವ್ಯಾಪ್ತಿಯಲ್ಲಿ ಆಗಸ್ಟ್‌ 30ರ ಬೆಳಿಗ್ಗೆ 6 ರಿಂದ ಆಗಸ್ಟ್‌ 31ರ ಬೆಳಿಗ್ಗೆ 6ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ, ಗೋವಿಂದಪುರ, ಬಾಣಸವಾಡಿ, ರಾಮಮೂರ್ತಿನಗರ, ಹೆಣ್ಣೂರು, ಕಮರ್ಷಿಯಲ್ ಸ್ಟ್ರೀಟ್, ಶಿವಾಜಿನಗರ, ಭಾರತೀನಗರ, ಪುಲಕೇಶಿನಗರ, ಹಲಸೂರು, ಕೊತ್ತನೂರು, ಅಮೃತಹಳ್ಳಿ, ಸಂಪಿಗೆಹಳ್ಳಿ, ಜೆ.ಸಿ.ನಗರ, ಆರ್.ಟಿ.ನಗರ, ಹೆಬ್ಬಾಳ, ಯಶವಂತಪುರ, ಸಂಜಯನಗರ, ಜಾಲಹಳ್ಳಿ, ಆರ್‌.ಎಂ.ಸಿ.ಯಾರ್ಡ್‌, ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಗಸ್ಟ್ 31ರ ಬೆಳಿಗ್ಗೆ 6ರಿಂದ ಸೆಪ್ಟೆಂಬರ್1ರ ಬೆಳಿಗ್ಗೆ 6ರವರೆಗೆ ಮದ್ಯ ಮಾರಾಟ ಇರುವುದಿಲ್ಲ. 

ತಲಘಟ್ಟಪುರ, ಸುಬ್ರಮಣ್ಯಪುರ, ಕೆಂಗೇರಿ, ಜ್ಞಾನಭಾರತಿ, ಕುಂಬಳಗೋಡು ಹಾಗೂ ಎಲೆಕ್ಟ್ರಾನಿಕ ಸಿಟಿ ವಿಭಾಗದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಗಸ್ಟ್ 31ರ ಬೆಳಿಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.