ಕಾರ್ಯಕ್ರಮದಲ್ಲಿ ಮಾತನಾಡಿನದ ಮೂಡ್ನಾಕೂಡು ಚಿನ್ನಸ್ವಾಮಿ
ಬೆಂಗಳೂರು: ಕವಿತೆ ಸತ್ಯ ಮತ್ತು ಸೌಂದರ್ಯದ ಸಂಗಮ. ಹೀಗಾಗಿ ಸೂಫಿಗಳು ತಮ್ಮ ಆಧ್ಯಾತ್ಮಿಕ ಭಾವನೆಗಳನ್ನು ಕವಿತೆಯ ರೂಪದಲ್ಲಿ ವ್ಯಕ್ತಪಡಿಸುತ್ತಿದ್ದರು. ಪ್ರವಾದಿ ಮುಹಮ್ಮದರು ಕವಿಗಳನ್ನು ಪ್ರೋತ್ಸಾಹಿಸಿದ ಕಾರಣವೂ ಇದೇ ಎಂದು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.
ಪೈಗಂಬರ್ ಮುಹಮ್ಮದ್ ಅವರ ಸಾವಿರದ ಐನೂರನೇ ಜನ್ಮದಿನಾಚರಣೆಯ ಭಾಗವಾಗಿ ಕಲ್ಲಿಕೋಟೆಯ ಮರ್ಕಝ್ ನಾಲೆಜ್ ಸಿಟಿ ಅಧೀನದ ವೀರಾಸ್ ಕನ್ನಡ ವಿದ್ಯಾರ್ಥಿಗಳು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ‘ಭವ್ಯ ಬದುಕಿನ ಕಾವ್ಯ ಪ್ರಸ್ತುತಿ’ ಎಂಬ ಶೀರ್ಷಿಕೆಯಲ್ಲಿ ಆಯೋಜಿಸಿದ ‘ಮೀಂ ಕವಿಗೋಷ್ಠಿ’ಯಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರು ಮಾತನಾಡಿ, ‘ಕವಿತೆ ಜೀವನದ ಕನ್ನಡಿ. ಜೀವನಾನುಭವಗಳು ಭಾವನೆಯಾಗಿ ಮೂಡಿದಾಗ ಕವಿತೆಯ ಸೌಂದರ್ಯ ಹೆಚ್ಚಾಗುತ್ತದೆ’ ಎಂದರು.
ನಾಲ್ಕು ಅವಧಿಗಳಲ್ಲಿ ನಡೆದ ಕವಿಗೋಷ್ಟಿಯಲ್ಲಿ ನಲ್ವತ್ತರಷ್ಟು ಕವಿತೆಗಳನ್ನು ವಾಚಿಸಲಾಯಿತು. ಸಾಹಿತಿಗಳಾದ ಯೋಗೇಶ್ ಮಾಸ್ಟರ್, ರಿಯಾಝ್ ಅಹ್ಮದ್ ಬೋಡೆ, ವೈ. ಜೆ. ಮೆಹಬೂಬ್ ಕಲಬುರಗಿ, ಪುನೀತ್ ಅಪ್ಪು ಕವಿಗೋಷ್ಠಿಗಳಿಗೆ ನೇತೃತ್ವ ನೀಡಿದರು.
ಸ್ವಾಲಿಹ್ ತೋಡಾರ್, ಯಂಶ ಬೇಂಗಿಲ ಸೇರಿ ಪ್ರಮುಖರು ಪೈಗಂಬರರ ಜೀವನದ ವಿಭಿನ್ನ ಕ್ಷಣಗಳನ್ನು ಆಧರಿಸಿ ಕವಿತೆಗಳನ್ನು ವಾಚಿಸಿದರು.
‘ಇಖ್'ರಅ್: ಓದಬೇಕೆನ್ನುವ ಮೊದಲ ವಾಣಿ’ ಎಂಬ ವಿಷಯದ ಕಾರ್ಯಗಾರಕ್ಕೆ ಪತ್ರಕರ್ತ ಬಿ.ಎಂ ಹನೀಫ್ ನೇತೃತ್ವ ನೀಡಿದರು.
ವಿರಾಸ್ ಪ್ರಾಧ್ಯಾಪಕರಾದ ಅಡ್ವಕೇಟ್ ಸುಹೈಲ್ ಸಖಾಫಿ, ಎಸ್. ಎಸ್. ಎಫ್. ಕರ್ನಾಟಕ ರಾಜ್ಯಾಧ್ಯಕ್ಷ ಸುಫಿಯಾನ್ ಸಖಾಫಿ ಶುಭ ಕೋರಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.