
ಪ್ರಜಾವಾಣಿ ವಾರ್ತೆ
ಬೆಂಗಳೂರು: ಪುರುಷರ ಸಾಂಪ್ರದಾಯಿಕ ಮತ್ತು ಮದುವೆ ಉಡುಪುಗಳಲ್ಲಿ ಮುಂಚೂಣಿಯಲ್ಲಿರುವ ಮಿನಿಸ್ಟರ್ ವೈಟ್ ಕ್ಲಾತಿಂಗ್, ಮಲ್ಲೇಶ್ವರದಲ್ಲಿ ಹೊಸ ಮಳಿಗೆಯನ್ನು ಆರಂಭಿಸಿದೆ.
ಮಿನಿಸ್ಟರ್ ವೈಟ್ ಕ್ಲಾತಿಂಗ್‌ನ ವ್ಯವಸ್ಥಾಪಕ ನಿರ್ದೇಶಕ ಪೋತಿರಾಜ್ ಮಳಿಗೆ ಉದ್ಘಾಟಿಸಿದರು.
ಇದು ಬ್ರ್ಯಾಂಡ್‌ಗೆ ಮಹತ್ವದ ಮೈಲುಗಲ್ಲಾಗಿದ್ದು, ದೇಶದಲ್ಲಿ 60ನೇ ಮಳಿಗೆ, ಕರ್ನಾಟಕದಲ್ಲಿ 5ನೇ ಮಳಿಗೆ ಹಾಗೂ ಬೆಂಗಳೂರಿನಲ್ಲಿ 2ನೇ ಮಳಿಗೆಯಾಗಿದೆ. ಕಚ್ಚೆ ಪಂಚೆ, ರೆಡಿಮೇಡ್ ಧೋತಿ, ಶರ್ಟ್‌ಗಳು, ಕಾಟನ್ ಶರ್ಟ್‌ಗಳು ಲಭ್ಯವಿದೆ.
ಪೋತಿರಾಜ್ ಮಾತನಾಡಿ, ‘ಭಾರತೀಯರ ಸಂಭ್ರಮ ಮತ್ತು ಮೌಲ್ಯಗಳ ಸಾರವನ್ನು ಉಳಿಸಿಕೊಂಡು ಗುಣಮಟ್ಟದ ಸಾಂಪ್ರದಾಯಿಕ ಉಡುಪುಗಳನ್ನು ಒದಗಿಸುವುದೇ ಮಿನಿಸ್ಟರ್ ವೈಟ್‌ನ ಬದ್ಧತೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.