ADVERTISEMENT

ನಮ್ಮ ಮೆಟ್ರೊ ಹಳದಿ ಮಾರ್ಗ: ಡಿಸೆಂಬರ್ 22ರಿಂದ ಪ್ರತಿ 12 ನಿಮಿಷಕ್ಕೊಂದು ರೈಲು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಡಿಸೆಂಬರ್ 2025, 6:18 IST
Last Updated 11 ಡಿಸೆಂಬರ್ 2025, 6:18 IST
   

ಬೆಂಗಳೂರು: ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ 6ನೇ ರೈಲು ಸದ್ಯದಲ್ಲಿಯೇ ಸಂಚಾರ ಆರಂಭಿಸಲಿದ್ದು, ಈ ಮಾರ್ಗದಲ್ಲಿ ಡಿಸೆಂಬರ್ 22ರಿಂದ ಪ್ರತಿ 12 ನಿಮಿಷಕ್ಕೊಂದು ರೈಲು ಸಂಚರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಪಶ್ಚಿಮ ಬಂಗಾಳದ ಟಿಟಾಗಢ ರೈಲ್ ಸಿಸ್ಟಂ ಲಿಮಿಟೆಡ್‌ (ಟಿಆರ್‌ಎಸ್‌ಎಲ್‌) ಕಾರ್ಯಾಗಾರದಿಂದ ರವಾನೆಯಾಗಿದ್ದ 6ನೇ ರೈಲು ನವೆಂಬರ್ ಕೊನೆಯ ವಾರದಲ್ಲಿ ಬೆಂಗಳೂರು ಮೆಟ್ರೊ ರೈಲು ನಿಗಮ ಲಿಮಿಟೆಡ್‌ಗೆ (ಬಿಎಂಆರ್‌ಸಿಎಲ್) ತಲುಪಿದ್ದವು.

ಆರನೇ ರೈಲು ಪ್ರಯಾಣಿಕರ ಸೇವೆಗೆ ಲಭ್ಯವಾಗುವ ಮೊದಲು ಸಿಗ್ನಲಿಂಗ್ ಇಂಟರ್ಫೇಸ್ ಪರೀಕ್ಷೆಯನ್ನು ಪೂರ್ಣಗೊಳಿಸಬೇಕಾಗಿದೆ. ಡಿಸೆಂಬರ್ 22ರಂದು ರೈಲನ್ನು ಸಂಚಾರಕ್ಕೆ ಅಣಿಗೊಳಿಸುವ ಯೋಜನೆಗಳು ನಡೆಯುತ್ತಿವೆ ಎಂದು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಆರ್‌.ವಿ. ರಸ್ತೆ–ಡೆಲ್ಟಾ ಎಲೆಕ್ಟ್ರಾನಿಕ್ಸ್‌ ಬೊಮ್ಮಸಂದ್ರ ನಡುವಿನ ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ವಾಣಿಜ್ಯ ಸಂಚಾರವನ್ನು ಕೇವಲ ಮೂರು ಕೋಚ್‌ಗಳೊಂದಿಗೆ (ಆರು ಬೋಗಿಗಳ ಒಂದು ಸೆಟ್‌ ಒಂದು ಕೋಚ್‌) ಆಗಸ್ಟ್ 11ರಂದು ಆರಂಭಿಸಲಾಗಿತ್ತು. ಆಗ 25 ನಿಮಿಷಕ್ಕೊಂದರಂತೆ ಟ್ರಿಪ್‌ಗಳಿದ್ದವು. ಒಂದು ತಿಂಗಳ ಬಳಿಕ ನಾಲ್ಕನೇ ರೈಲು ಓಡಾಟ ಆರಂಭವಾದ ಮೇಲೆ ಟ್ರಿಪ್‌ಗಳ ನಡುವಿನ ಅಂತರ 19 ನಿಮಿಷಕ್ಕೆ ಇಳಿದಿತ್ತು. ಸದ್ಯ ದಟ್ಟಣೆ ಅವಧಿಯಲ್ಲಿ 15 ನಿಮಿಷಕ್ಕೊಂದು ರೈಲು ಸಂಚರಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.