ADVERTISEMENT

Photos| ಸಂಭ್ರಮದಲ್ಲಿ ಮಿಂದೆದ್ದ ಯುವಕ–ಯುವತಿಯರು: ಬೆಂಗಳೂರಿನಲ್ಲಿ ಹೀಗಿತ್ತು ಹೊಸ ವರ್ಷಾಚರಣೆ

ಎರಡು ವರ್ಷಗಳ ಬಳಿಕ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಜನರು ಕಿಕ್ಕಿರಿದು ಸೇರಿದ್ದರು. ಶನಿವಾರ ರಾತ್ರಿ ಎಲ್ಲೆಡೆಯು ಯುವಪಡೆಯ ಹರ್ಷೋದ್ಗಾರ ಹಾಗೂ ಕೇಕೆ– ಶಿಳ್ಳೆ ಹೆಚ್ಚಿತ್ತು. ಹೊಸ ವರ್ಷ ಸ್ವಾಗತಿಸಿದ ಜನ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು...ಕೋವಿಡ್‌ ಕಾರಣದಿಂದಾಗಿ ಸಾರ್ವಜನಿಕ ಸ್ಥಳಗಳಲ್ಲಿ ವರ್ಷಾಚರಣೆಗೆ ಎರಡು ವರ್ಷ ನಿರ್ಬಂಧವಿತ್ತು. ಈ ವರ್ಷ ಎಲ್ಲವನ್ನೂ ಮರೆತು ಜನರು ಸಂಭ್ರಮದಲ್ಲಿ ಮಿಂದೆದ್ದರು.ರಾತ್ರಿ 12ರ ದಾಟುತ್ತಿದ್ದಂತೆಯೇ ನಗರದಲ್ಲಿ 2023 ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು. ಜನರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಹೊಸ ವರ್ಷ ಸ್ವಾಗತಿಸಿದರು. ಕೆಲವೆಡೆ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡರು.ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ ಸ್ಟ್ರೀಟ್‌, ಇಂದಿರಾನಗರ, ವೈಟ್‌ಫೀಲ್ಡ್‌, ಬೆಳ್ಳಂದೂರು, ಕೊತ್ತನೂರು, ಕೋರಮಂಗಲ, ಎಚ್‌ಎಸ್‌ಆರ್‌ ಲೇಔಟ್‌ನ ರಸ್ತೆಗಳು ಜನರಿಂದ ತುಂಬಿ ತುಳುಕಿದವು.ಹೊಸ ವರ್ಷಾಚರಣೆಗೆಂದೇ ರಸ್ತೆಗಳಲ್ಲಿ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ದೀಪಗಳ ಬೆಳಕಿನಲ್ಲಿ ಯುವಕರು ಉತ್ಸಾಹದಿಂದ ಕುಣಿದರು.ರಸ್ತೆಯ ಒಂದು ಕಡೆಯಿಂದ ಮತ್ತೊಂದು ಬದಿಗೆ ಓಡಾಟ ನಡೆಸು ವವರ ಸಂಖ್ಯೆ ಹೆಚ್ಚಿತ್ತು. ಸಂಜೆಯ ಕತ್ತಲು ಕವಿಯುತ್ತಿದ್ದಂತೆ ಈ ರಸ್ತೆಗಳತ್ತ ಜನರು ಬರಲು ಆರಂಭಿಸಿದ್ದರು.ರಸ್ತೆಗಳಲ್ಲಿ ಮಾತ್ರವಲ್ಲದೆ ನಗರದ ಬಹುತೇಕ ಮನೆಗಳಲ್ಲಿ ನೂತನ ವರ್ಷಾ ಚರಣೆ ಸಂಭ್ರಮವಿತ್ತು.

​ಪ್ರಜಾವಾಣಿ ವಾರ್ತೆ
Published 1 ಜನವರಿ 2023, 2:32 IST
Last Updated 1 ಜನವರಿ 2023, 2:32 IST
ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನ ಪಬ್ ಒಂದರಲ್ಲಿ ಹೊಸ ವರ್ಷದ ಪ್ರಯುಕ್ತ ಶನಿವಾರ ರಾತ್ರಿ ಯುವಕ ಯುವತಿಯರ ನರ್ತನ–ಪ್ರಜಾವಾಣಿ ಚಿತ್ರ/ ರಂಜು ಪಿ
ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನ ಪಬ್ ಒಂದರಲ್ಲಿ ಹೊಸ ವರ್ಷದ ಪ್ರಯುಕ್ತ ಶನಿವಾರ ರಾತ್ರಿ ಯುವಕ ಯುವತಿಯರ ನರ್ತನ–ಪ್ರಜಾವಾಣಿ ಚಿತ್ರ/ ರಂಜು ಪಿ   
ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನ ಪಬ್ ಒಂದರಲ್ಲಿ ಯುವಕರ ಸಂಭ್ರಮ–ಪ್ರಜಾವಾಣಿ ಚಿತ್ರ/ ರಂಜು ಪಿ
ಹೊಸ ವರ್ಷಾಚರಣೆಯಲ್ಲಿ ತೊಡಗಿದ್ದ ಯುವಕರು–ಪ್ರಜಾವಾಣಿ ಚಿತ್ರ/ ರಂಜು ಪಿ
ರಾತ್ರಿ 12 ಗಂಟೆ ಆಗುತ್ತಲೇ ಘೋಷಣೆಗಳನ್ನು ಕೂಗುತ್ತ ಸಂಭ್ರಮ ವ್ಯಕ್ತಪಡಿಸಿದ ಜನ–ಪ್ರಜಾವಾಣಿ ಚಿತ್ರ/ ರಂಜು ಪಿ
ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಹೊಸ ವರ್ಷಾಚರಣೆಗೆ ಸೇರಿದ ಜನ – ಪ್ರಜಾವಾಣಿ ಚಿತ್ರ: ದಿನೇಶ್‌
ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಹೊಸ ವರ್ಷಾಚರಣೆಗೆ ಸೇರಿದ ಜನ– ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಹೊಸ ವರ್ಷಾಚರಣೆಗೆ ಮಕ್ಕಳನ್ನೂ ಕರೆ ತಂದಿದ್ದ ಮಹಿಳೆಯರು– ಪ್ರಜಾವಾಣಿ ಕಿಶೋರ್ ಕುಮಾರ್ ಬೋಳಾರ್
ಮುಖವಾಡ ಕಿತ್ತ ಪೊಲೀಸರು– ಪ್ರಜಾವಾಣಿ ಚಿತ್ರ: ದಿನೇಶ್‌
ರಾತ್ರಿ 12 ಗಂಟೆ ನಂತರ ಪೊಲೀಸರು ಜನಸ್ತೋಮವನ್ನು ಚದುರಿಸಲಾರಂಭಿಸಿದರು. ಚಿತ್ರ: ದಿನೇಶ್‌
ರಾತ್ರಿ 12 ಗಂಟೆ ನಂತರ ಪೊಲೀಸರು ಜನಸ್ತೋಮವನ್ನು ಚದುರಿಸಲಾರಂಭಿಸಿದರು– ಪ್ರಜಾವಾಣಿ ಚಿತ್ರ: ದಿನೇಶ್‌
ವರ್ಷಾಚರಣೆಯ ನಂತರ ಬಿಕೋ ಎನ್ನುತ್ತಿರುವ ಚರ್ಚ್‌ಸ್ಟ್ರೀಟ್‌
ಬೆಂಗಳೂರು ನಗರದ ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯನ್ನು ರಾತ್ರಿ 1 ಗಂಟೆ ಬಳಿಕ ಅರ್ಧ ತಾಸಿನಲ್ಲಿ ಖಾಲಿ ಮಾಡಿಸಿದ ಪೊಲೀಸ್– ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.