ADVERTISEMENT

New Year Celebrations: ಹೊಸ ವರ್ಷಾಚರಣೆಗೆ ಸುರಕ್ಷತಾ ಮಾರ್ಗಸೂಚಿ ಹೀಗಿದೆ ನೋಡಿ

ಸುರಕ್ಷತಾ ಮಾರ್ಗಸೂಚಿ ಹೊರಡಿಸಿದ ಡಿಜಿ‍–ಐಜಿಪಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 0:30 IST
Last Updated 29 ಡಿಸೆಂಬರ್ 2025, 0:30 IST
 ಎಂ.ಎ. ಸಲೀಂ 
 ಎಂ.ಎ. ಸಲೀಂ    

ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ ಅವರು ಸಾರ್ವಜನಿಕರು ಹಾಗೂ ಪೊಲೀಸ್ ಸಿಬ್ಬಂದಿಗೆ ಸುರಕ್ಷತಾ ಮಾರ್ಗಸೂಚಿ ಹೊರಡಿಸಿದ್ದಾರೆ.

ಸಂಭ್ರಮದ ನಡುವೆ ಜನಸಮೂಹದ ವರ್ತನೆ ಮತ್ತು ಅಪಾಯಗಳು ಹೊಸ ವರ್ಷಾಚರಣೆಯ ಮೇಲೆ ಪರಿಣಾಮ ಬೀರಬಹುದಾಗಿದ್ದು, ಕೆಲವು ಅಂಶಗಳನ್ನು ಗುರುತಿಸಿ ಮಾರ್ಗಸೂಚಿ ನೀಡಲಾಗಿದೆ. ಭದ್ರತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಈ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಸಲೀಂ ಆದೇಶಿಸಿದ್ದಾರೆ.

ಸಾರ್ವಜನಿಕರಿಗೆ ಸೂಚನೆ:

ADVERTISEMENT


* ಮದ್ಯಪಾನವು ವಿವೇಚನಾ ಶಕ್ತಿಯನ್ನು ಕುಗ್ಗಿಸಿ, ಸಂಕೋಚವನ್ನು ದೂರ ಮಾಡುತ್ತದೆ. ಜನಸಮೂಹದ ನಡುವೆ ಇರುವುದರಿಂದ ನಮಗೆ ಏನೂ ಅಪಾಯವಿಲ್ಲ ಎಂಬ ತಪ್ಪು ಕಲ್ಪನೆ ಮೂಡಿಸುವುದರಿಂದ ಚುಡಾಯಿಸುವಿಕೆ (ಈವ್-ಟೀಸಿಂಗ್) ಅಥವಾ ಜಗಳಕ್ಕೆ ಪ್ರಚೋದಿಸಬಹುದು


* ಸಂಗೀತದ ಅತಿಯಾದ ಶಬ್ದ ಮತ್ತು ಪಟಾಕಿ ಸಿಡಿಸುವುದು ಅಪ್ರಜ್ಞಾಪೂರ್ವಕ ವರ್ತನೆಗೆ ಪ್ರಚೋದನೆ ನೀಡಬಹುದು. ವದಂತಿ ಹರಡಿದರೆ ಜನರಲ್ಲಿ ತಕ್ಷಣವೇ ಕೋಪ ಮತ್ತು ಆತಂಕ ಉಂಟಾಗಬಹುದು. ಇಳಿಜಾರು ಪ್ರದೇಶಗಳು, ಮೆಟ್ಟಿಲುಗಳು ಮತ್ತು ಸರಿಯಾದ ಗಾಳಿ–ಬೆಳಕಿಲ್ಲದ ಮಾಲ್‍ಗಳಲ್ಲಿ ಅಪಾಯದ ಸಾಧ್ಯತೆ ಹೆಚ್ಚಿರುವುದರಿಂದ ಸಾರ್ವಜನಿಕರು ಪ್ರಜ್ಞಾ ಪೂರ್ವಕವಾಗಿ ವರ್ತಿಸಬೇಕು

ಪೊಲೀಸರಿಗೆ ನಿರ್ದೇಶನ:
* ಬೀಚ್‍ಗಳು, ಮಾಲ್‍ಗಳು, ಬಾರ್‌ಗಳು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಬೇಕು
* ವಾಹನ, ಕಾಲ್ನಡಿಗೆ, ಬೈಕ್ ಮತ್ತು ಅಶ್ವಾರೋಹಿ ಸಿಬ್ಬಂದಿಯ ಗಸ್ತು ಹೆಚ್ಚಿಸಬೇಕು
* ಎಲ್ಲಾ ಚೆಕ್ ಪೋಸ್ಟ್‌ಗಳಲ್ಲಿ ವಿಡಿಯೊ ಚಿತ್ರೀಕರಣ ಕಡ್ಡಾಯ
* ಪಾನಮತ್ತ ಚಾಲನೆ ವಿರುದ್ಧ ಶೂನ್ಯ ಸಹಿಷ್ಣುತೆ ಪಾಲಿಸುವುದು. ತಕ್ಷಣವೇ ಪ್ರಕರಣ ದಾಖಲಿಸಿ ವಾಹನ ಜಪ್ತಿ ಮಾಡಬೇಕು
* ಚುಡಾಯಿಸುವಿಕೆ ತಡೆಗೆ ಮಹಿಳಾ ಪೊಲೀಸ್‌ ತಂಡಗಳನ್ನು ನಿಯೋಜಿಸುವುದು ಮತ್ತು ಮಹಿಳಾ ಸುರಕ್ಷತಾ ದ್ವೀಪ ಸ್ಥಾಪಿಸುವುದು
* ಡ್ರೋನ್, ಸಿ.ಸಿ.ಟಿ.ವಿ ಕ್ಯಾಮೆರಾ ಮತ್ತು ಕೃತಕ ಬುದ್ಧಿಮತ್ತೆ (ಎ.ಐ) ಬಳಸಿ ಜನಸಂದಣಿಯ ಮೇಲೆ ನಿಗಾ ಇಡುವುದು
* ಧ್ವನಿವರ್ಧಕಗಳ ಮೂಲಕ ಜನರನ್ನು ಶಾಂತಗೊಳಿಸಲು ಅಥವಾ ಮಾರ್ಗ ಬದಲಿಸಲು ಸೂಚನೆ ನೀಡುವುದು
* ಆಂಬುಲೆನ್ಸ್, ಅಗ್ನಿಶಾಮಕ ಮತ್ತು ವೈದ್ಯಕೀಯ ತಂಡಗಳು ಸನ್ನದ್ಧ ಸ್ಥಿತಿಯಲ್ಲಿರಬೇಕು
* ಕರ್ತವ್ಯದಲ್ಲಿರುವ ಸಿಬ್ಬಂದಿ ಕಡ್ಡಾಯವಾಗಿ ಪ್ರತಿಫಲನ ಜಾಕೆಟ್ ಧರಿಸಬೇಕು
* ಜನಸಮೂಹದ ಮೇಲೆ ನಿಗಾ ಇಡಲು ಎತ್ತರದ ವೀಕ್ಷಣಾ ಗೋಪುರ ನಿರ್ಮಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.