ADVERTISEMENT

ಡಿ.20ರಂದು ಇಂದಿರಾನಗರದಲ್ಲಿ ಪ್ರಜಾವಾಣಿ & ಡೆಕ್ಕನ್ ಹೆರಾಲ್ಡ್ ‘ಭೂಮಿಕಾ ಕ್ಲಬ್‌’

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 23:48 IST
Last Updated 18 ಡಿಸೆಂಬರ್ 2025, 23:48 IST
ಭೂಮಿಕಾ ಕ್ಲಬ್ ಲೋಗೊ
ಭೂಮಿಕಾ ಕ್ಲಬ್ ಲೋಗೊ   

ಬೆಂಗಳೂರು: ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಮಹಿಳೆಯರಿಗಾಗಿ ಸ್ಥಾಪಿಸಿರುವ ‘ಭೂಮಿಕಾ ಕ್ಲಬ್’ ವೇದಿಕೆಯು ಇದೇ ಶನಿವಾರ (ಡಿ.20) ಮಧ್ಯಾಹ್ನ 4ಕ್ಕೆ ಇಂದಿರಾನಗರದಲ್ಲಿರುವ ಇಂದಿರಾನಗರ ಕ್ಲಬ್‌ನಲ್ಲಿ 33ನೇ ಆವೃತ್ತಿಯ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.

‘ಫ್ರೀಡಂ ಹೆಲ್ತಿ ಕುಕ್ಕಿಂಗ್ ಆಯಿಲ್’ ಮತ್ತು ಮಣಿಪಾಲ್ ಆಸ್ಪತ್ರೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಅಡುಗೆ ತಯಾರಿ, ಸಂಗೀತ ಕಾರ್ಯಕ್ರಮ ಸೇರಿ ಹಲವು ವಿಶಿಷ್ಟತೆಯನ್ನು ಈ ಕಾರ್ಯಕ್ರಮ ಒಳಗೊಂಡಿರಲಿದೆ. 2022ರಲ್ಲಿ ಪ್ರಾರಂಭವಾದ ಈ ವೇದಿಕೆಯು, ಈವರೆಗೆ ಬೆಂಗಳೂರಿನಲ್ಲಿ 14 ಕಾರ್ಯಕ್ರಮಗಳನ್ನು ನಡೆಸಿದೆ. ರಾಜ್ಯದಾದ್ಯಂತ ಜನಪ್ರಿಯವಾದ ಈ ಕಾರ್ಯಕ್ರಮವನ್ನು ಈಗ ಮತ್ತೆ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. 

ಆರೋಗ್ಯ ಮತ್ತು ಕ್ಷೇಮದ ಬಗ್ಗೆ ಮಣಿಪಾಲ್ ಆಸ್ಪತ್ರೆಯ ವೈದ್ಯಕೀಯ ತಜ್ಞರಾದ ಡಾ. ಪೂನಂ ಪಾಟೀಲ ಅವರು ಉಪನ್ಯಾಸ ನೀಡಲಿದ್ದಾರೆ. ಪದ್ಮಿನಿ ಪ್ರಿಯ ನೃತ್ಯ ಕಲಾ ಅಕಾಡೆಮಿಯ ಉಷಾ ಬಸಪ್ಪ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಅನಘಾ ಎಂ. ಅವರಿಂದ ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. 

ADVERTISEMENT

ವರ್ಷಿಣಿ ಅವರಿಂದ ಹಾಸ್ಯ ಭಾಷಣ (ಸ್ಟ್ಯಾಂಡ್ ಅಪ್ ಕಾಮಿಡಿ), ಚಂದನಾ ಲಕ್ಷ್ಮಿಕಾಂತ್ ಅವರಿಂದ ಜುಂಬಾ ಚಟುವಟಿಕೆ ಹಾಗೂ ಅಡುಗೆ ತಯಾರಿ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ. 

ಹೊಸ ವಿಷಯಗಳನ್ನು ಕಲಿಯಲು, ಸಮಾನ ಮನಸ್ಕರೊಂದಿಗೆ ಬೆರೆಯಲು, ಸೃಜನಶೀಲತೆ ಪ್ರದರ್ಶಿಸಲು, ಆರೋಗ್ಯ ಮತ್ತು ಕ್ಷೇಮ ಜಗತ್ತಿನ ಬಗ್ಗೆ ಮಾಹಿತಿ ಪಡೆಯಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ. ಪ್ರೇಕ್ಷಕರಿಗೆ ವಿವಿಧ ಸ್ಪರ್ಧೆ ಇರಲಿದ್ದು, ಭಾಗವಹಿಸಿದ ಎಲ್ಲರಿಗೂ ಉಡುಗೊರೆಗಳು ಇರಲಿವೆ. ಒಬ್ಬ ಅದೃಷ್ಟ ಪ್ರೇಕ್ಷಕರಿಗೆ ₹ 15 ಸಾವಿರ ಮೌಲ್ಯದ ವಾಟರ್ ಪ್ಯೂರಿಫೈಯರ್ ಗೆಲ್ಲುವ ಅವಕಾಶ ಇರಲಿದೆ.

ಅದೃಷ್ಟ ಪ್ರೇಕ್ಷಕರೊಬ್ಬರಿಗೆ ‘ಪ್ರಜಾವಾಣಿ ಸಿನಿ ಸಮ್ಮಾನ’ ಸಮಾರಂಭದ ಎರಡು ವಿವಿಐಪಿ ಪಾಸ್‌ಗಳನ್ನು ಗೆಲ್ಲುವ ಅವಕಾಶವಿರುತ್ತದೆ. 10 ಅದೃಷ್ಟ ಪ್ರೇಕ್ಷಕರಿಗೆ ಮಲ್ಟಿಪ್ಲೆಕ್ಸ್‌ನಲ್ಲಿ ಚಲನಚಿತ್ರ ವೀಕ್ಷಣೆಗೆ ತಲಾ ಎರಡು ಟಿಕೆಟ್‌ಗಳನ್ನು ಗೆಲ್ಲುವ ಅವಕಾಶ ಇರಲಿದೆ. ‌ಪ್ರವೇಶ ಉಚಿತ ಇರಲಿದ್ದು, ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕು.

ವಿವರಕ್ಕೆ ಸಂಪರ್ಕ ಸಂಖ್ಯೆ: 9035036186

ನೋಂದಣಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.