
ಪ್ರಜಾವಾಣಿ ವಾರ್ತೆ
ಬೆಂಗಳೂರು: ಭಾರತೀಯ ಶಿಕ್ಷಣ ಮಂಡಲದಿಂದ ಫೆ. 28ರಂದು ಬೆಳಿಗ್ಗೆ 8.30ಕ್ಕೆ ನೃಪತುಂಗ ರಸ್ತೆಯಲ್ಲಿರುವ ದಿ ಮಿಥಿಕ್ ಸೊಸೈಟಿಯಲ್ಲಿ ‘ವಿಕಸಿತ ಭಾರತ್ ಶಿಕ್ಷಾ ಅಧಿಷ್ಠಾನ್ (ವಿಬಿಎಸ್‌ಎ) ಮಸೂದೆ’ ಕುರಿತು ದುಂಡು ಮೇಜಿನ ಸಭೆ ನಡೆಯಲಿದೆ.
ದುಂಡು ಮೇಜಿನ ಸಭೆಯಲ್ಲಿ ವಿಬಿಎಸ್‌ಎ ಮಸೂದೆಗೆ ಸಂಬಂಧಿಸಿದಂತೆ ಶಿಕ್ಷಣ ತಜ್ಞರು ಚರ್ಚೆಗಳನ್ನು ನಡೆಸಲಿದ್ದಾರೆ. ಇದರಲ್ಲಿ ವಿಶ್ವವಿದ್ಯಾಲಯಗಳ ಕುಲಪತಿಗಳು, ನಿರ್ದೇಶಕರು, ಸಂಶೋಧಕರು ಭಾಗವಹಿಸಲಿದ್ದಾರೆ. ಈ ಸಭೆಗೆ ದಿ ಮಿಥಿಕ್ ಸೊಸೈಟಿಯ ಸಹಯೋಗ ಇದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.