ADVERTISEMENT

VIDEO: ಕೈ ಇಲ್ಲದಿದ್ದರೂ ಏನೆಲ್ಲಾ ಮಾಡ್ತಾರೆ ನೋಡಿ, ಶುಭಜಿತ್ ಎಂಬ ಸ್ಫೂರ್ತಿ ಸೆಲೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 13:45 IST
Last Updated 1 ಡಿಸೆಂಬರ್ 2025, 13:45 IST

ವಿದ್ಯುತ್‌ ಸ್ಪರ್ಶದಿಂದ ಎರಡೂ ಕೈಗಳನ್ನು ಕಳೆದುಕೊಂಡಿರುವ ಶುಭಜಿತ್‌ ಭಟ್ಟಾಚಾರ್ಯ ಬಹುತೇಕರಿಗೆ ಸ್ಫೂರ್ತಿಯ ಚಿಲುಮೆ. ತಮ್ಮಂತೆಯೇ ದೈಹಿಕ ನ್ಯೂನತೆ ಹೊಂದಿರುವವರಲ್ಲಿ ಸ್ವಾಭಿಮಾನದ ಬೀಜ ಬಿತ್ತುವ ಕೆಲಸವನ್ನೂ ಮಾಡುತ್ತಿದ್ದಾರೆ. ಎರಡೂ ಕೈಗಳು ಇಲ್ಲದಿದ್ದರೂ ಚಾಲನಾ ಪರವಾನಗಿ (ಡಿಎಲ್) ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಲವು ಸಮಾಜಮುಖಿ ಕೆಲಸಗಳನ್ನೂ ಮಾಡುತ್ತಿರುವ ಶುಭಜಿತ್, ಸದ್ಯ ಬೆಂಗಳೂರಿನ ಅಕ್ಷದಾ ಫೌಂಡೇಷನ್‌ನಲ್ಲಿ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕರಾಗಿದ್ದಾರೆ. ಅವರ ಸ್ಫೂರ್ತಿದಾಯಕ ಕಥನ ಈ ವಿಡಿಯೊದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.