ADVERTISEMENT

ವಿದೇಶಗಳಿಂದ ಬಂದ 6 ಮಂದಿಗೆ ಕೋವಿಡ್ ಸೋಂಕು ದೃಢ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 20:36 IST
Last Updated 22 ಡಿಸೆಂಬರ್ 2021, 20:36 IST
ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈರಿಸ್ಕ್ ದೇಶಗಳಿಂದ ಬಂದಿರುವ ಪ್ರಯಾಣಿಕರಿಗೆ ಆರ್‌ಟಿ ಪಿಸಿಆರ್ ತಪಾಸಣೆ ಮಾಡುತ್ತಿರುವುದು
ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈರಿಸ್ಕ್ ದೇಶಗಳಿಂದ ಬಂದಿರುವ ಪ್ರಯಾಣಿಕರಿಗೆ ಆರ್‌ಟಿ ಪಿಸಿಆರ್ ತಪಾಸಣೆ ಮಾಡುತ್ತಿರುವುದು   

ದೇವನಹಳ್ಳಿ:ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬುಧವಾರ ಮುಂಜಾನೆ ಹೈರಿಸ್ಕ್ (ಓಮೈಕ್ರಾನ್‌ ಪ್ರಕರಣ ಹೆಚ್ಚಿರುವ ದೇಶಗಳು) ದೇಶಗಳಿಂದ ಬಂದಿರುವ ಪ್ರಯಾಣಿಕರ ಪೈಕಿ 6 ಮಂದಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದ್ದಾರೆ.

ಇಂಗ್ಲೆಂಡ್‌ನಿಂದ ಬಂದಿರುವ 34 ವರ್ಷದ ಮಹಿಳೆ, 25 ವರ್ಷದ ಪುರುಷ, ಪ್ಯಾರಿಸ್‌ನಿಂದ ಬಂದಿರುವ 22 ವರ್ಷದ ಮಹಿಳೆ, ಫ್ರಾಂಕ್‌ಫರ್ಟ್‌ನಿಂದ ಬಂದಿರುವ 21 ವರ್ಷದ ಪುರುಷ, ಕುವೈತ್‌ನಿಂದ ಬಂದಿರುವ 45 ವರ್ಷದ ಮಹಿಳೆ ಮತ್ತು 46 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT