ADVERTISEMENT

‘ಜಮೀರ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಿ’: ಟಿಎ ಶರವಣ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 16:48 IST
Last Updated 18 ಅಕ್ಟೋಬರ್ 2021, 16:48 IST
ಟಿ.ಎ.ಶರವಣ
ಟಿ.ಎ.ಶರವಣ   

ಬೆಂಗಳೂರು: ‘ಜಮೀರ್ ಅಹಮ್ಮದ್ ಖಾನ್‌ ಅವರನ್ನು ಶಾಸಕ ಮತ್ತು ಸಚಿವರನ್ನಾಗಿ ಮಾಡಿದ್ದು ಯಾವ ಪಕ್ಷ ಎಂಬುದನ್ನು ಮೊದಲು ನೆನಪಿಸಿಕೊಳ್ಳಲಿ’ ಎಂದು ಜೆಡಿಎಸ್ ರಾಜ್ಯ ವಕ್ತಾರ ಟಿ.ಎ. ಶರವಣ ಲೇವಡಿ ಮಾಡಿದರು.

‘ಜೆಡಿಎಸ್‌ನಲ್ಲಿ ಅಲ್ಪಸಂಖ್ಯಾತರನ್ನು ಮುಖ್ಯಮಂತ್ರಿ ಮಾಡಿಲ್ಲ ಎಂದು ಜಮೀರ್ ಹೇಳುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಜಮೀರ್ ಅವರನ್ನೇ ಮುಖ್ಯಮಂತ್ರಿ ಎಂದು ಆ ಪಕ್ಷದ ನಾಯಕರು ಘೋಷಣೆ ಮಾಡಿದರೆ ನಮ್ಮ ಆಕ್ಷೇಪವೇನೂ ಇಲ್ಲ. ಬೇರೆಲ್ಲಾ ಅಲ್ಪಸಂಖ್ಯಾತ ನಾಯಕರನ್ನು ಮುಗಿಸಿದಂತೆ ಜಮೀರ್ ಅವರನ್ನು ಕಾಂಗ್ರೆಸ್‌ನವರು ಮುಗಿಸುತ್ತಾರೆ ಎಂಬ ಆತಂಕವಿದೆ. ಮರಳಿ ಜೆಡಿಎಸ್‌ಗೆ ಬರುವುದಾದರೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಕುಮಾರಸ್ವಾಮಿ ಅವರನ್ನು ಇಂದ್ರ–ಚಂದ್ರ ಎನ್ನುತ್ತಿದ್ದ ಜಮೀರ್ ಈಗ ಆರೋಪ ಮಾಡುತ್ತಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಸಿ.ಎಂ. ಇಬ್ರಾಹಿಂ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲಿ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸ್ಥಾನವನ್ನು ಅಲ್ಪಸಂಖ್ಯಾತರಿಗೆ ನೀಡುವುದಾಗಿ ಕಾಂಗ್ರೆಸ್‌ನವರು ಘೋಷಿಸಲಿ’ ಎಂದು ಸವಾಲು ಹಾಕಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.