ಬೆಂಗಳೂರು: ಟಾಟಾ ಸಮೂಹವು ನಗರದಲ್ಲಿ ‘ಮೆಡಿಕಲ್ ಸ್ಕೂಲ್’ ಪ್ರಾರಂಭಿಸಲು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಜತೆಗೆ ಒಪ್ಪಂದ ಮಾಡಿಕೊಂಡಿದೆ.
ನಗರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಉಭಯ ಸಂಸ್ಥೆಗಳ ಮುಖ್ಯಸ್ಥರು ಈ ಒಪ್ಪಂದದ ಬಗ್ಗೆ ಘೋಷಿಸಿದರು. ಇಲ್ಲಿನ ಐಐಎಸ್‌ಸಿ ಕ್ಯಾಂಪಸ್‌ನಲ್ಲಿ ಈ ಮೆಡಿಕಲ್ ಸ್ಕೂಲ್ ನಿರ್ಮಾಣವಾಗಲಿದೆ. ಟಾಟಾ ಸಮೂಹವು ಈ ಸಂಸ್ಥೆಯ ನಿರ್ಮಾಣಕ್ಕೆ ₹ 500 ಕೋಟಿ ನೀಡುವುದಾಗಿ ಘೋಷಿಸಿದೆ.
‘ಈ ಮೆಡಿಕಲ್ ಸ್ಕೂಲ್ ವೈದ್ಯಕೀಯ ಶಿಕ್ಷಣದ ಜತೆಗೆ ಕ್ಲಿನಿಕಲ್ ಸಂಶೋಧನೆಗೆ ಆದ್ಯತೆ ನೀಡಲಿದೆ. ಹೃದಯ ವಿಜ್ಞಾನ, ನರ ವಿಜ್ಞಾನ ಸೇರಿ ವಿವಿಧ ವೈದ್ಯಕೀಯ ವಿಜ್ಞಾನಗಳನ್ನು ಕೇಂದ್ರೀಕರಿಸಲಿದ್ದು, ಪದವಿ ಕೋರ್ಸ್‌ಗಳು ಇರಲಿವೆ’ ಎಂದು ಟಾಟಾ ಸನ್ಸ್ ಅಧ್ಯಕ್ಷ ಎನ್.ಸಿ. ಚಂದ್ರಶೇಖರನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.