ಬೆಂಗಳೂರು: ಬಿಬಿಎಂಪಿಯು 2021-22ನೇ ಸಾಲಿಗೆ ₹9287.81 ಕೋಟಿ ವೆಚ್ಚದ ಬಜೆಟ್ ಮಂಡಿಸಿದೆ.
ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ ಅವರು ಶನಿವಾರ ಬಜೆಟ್ ಮಂಡಿಸಿದರು.
ಒಟ್ಟು ₹9287.81 ಕೋಟಿ ಆದಾಯ ನಿರೀಕ್ಷಿಸಿ ಹಾಗೂ ₹9286.86 ಕೋಟಿ ವೆಚ್ಚ ನಿರೀಕ್ಷಿಸಿ ಆಯವ್ಯಯ ಮಂಡಿಸಿದರು.
ಬಜೆಟ್ ಮುಖ್ಯಾಂಶಗಳು...
* ಯಾವುದೇ ತೆರಿಗೆ ಹೆಚ್ಚಳ ಮಾಡಿಲ್ಲ.
* ವಲಯಗಳು, ವಿಧಾನಸಭಾ ಕ್ಷೇತ್ರ ಗಾಗೂ ವಾರ್ಡ್ಗಳ ಆಡಳಿತ ವಿಕೇಂದ್ರೀಕರಣಕ್ಕೆ ಆದ್ಯತೆ ನೀಡಲಾಗಿದೆ. ಇದಕ್ಕಾಗಿ ₹2000 ಕೋಟಿ ಹಂಚಿಕೆ ಮಾಡಲಾಗಿದೆ.
*ಆಸ್ತಿ ತೆರಿಗೆ ಸಂಗ್ರಹ ಉತ್ತೇಜನಕ್ಕೆ ಆಯಾ ವಾರ್ಡ್ನಲ್ಲಿ ಸಂಗ್ರಹವಾಗುವ ಶೇ 1ರಷ್ಟು ಅನುದಾನ ಅದೇ ವಾರ್ಡ್ಗೆ ಮೀಸಲು
* ಕಸದ ರಾಶಿ ಕಂಡುಬಾರದ ವಾರ್ಡ್ಗೆ ₹50 ಲಕ್ಷ ಪ್ರೋತ್ಸಾಹಧನ
* ಪಾಲಿಕೆಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳ ರಸ್ತರ ಅಭಿವೃದ್ಧಿಗೆ ₹1000 ಕೋಟಿ ಮೀಸಲು
* ಕೋವಿಡ್ ನಿಯಂತ್ರಣ ವೆಚ್ಚ ಭರಿಸಲು ಸರ್ಕಾರ ₹300 ಕೋಟಿ ನೀಡಿದೆ. ಪಾಲಿಕೆ ₹ 90 ಭರಿಸಿದೆ.
* ಇ– ಆಸ್ತಿ ತಂತ್ರಾಂಶವನ್ನು ಎಲ್ಲ ವಾರ್ಡ್ಗಳಲ್ಲಿ ಜಾರಿಗೊಳಿಸಲು ನಿರ್ಧರಿಸಲಾಗಿದೆ.
* ಬೀದಿನಾಯಿ ಹಾವಳಿ ತಡೆಗೆ ₹5 ಕೋಟಿ ಮೀಸಲು
*ಆಸ್ತಿಗೆ ಸಂಬಂಧಿಸಿ ಬಿ– ಖಾತಾ ನಿರ್ವಹಣೆ ರದ್ದು ಪಡಿಸಿ ಎ–ಖಾತಾ ಮಾತ್ರ ನಿರ್ವಹಿಸಲು ತೀರ್ಮಾನ
*ಒಂಟಿ ಮನೆ ಯೋಜನೆ ಹೊಸ ಫಲಾನುಭವಿ ಆಯ್ಕೆ ಇಲ್ಲ
* ವೈದ್ಯಕೀಯ ವೆಚ್ಚ ಮರುಪಾವತಿಗೆ ₹25 ಕೋಟಿ
* ಪಾದಚಾರಿ ಮಾರ್ಗ ದುರಸ್ತಿಗೆ ಪ್ರತಿ ವಾರ್ಡ್ಗೆ ₹20 ಲಕ್ಷ
* ಉದ್ಯಾನ ನಿರ್ವಹಣೆಗೆ ಹಾಗೂ ಪರಿಸರ ನಿರ್ವಹಣೆಗೆ ₹214 ಕೋಟಿ
* ಅರಣ್ಯ ಇಲಾಖೆಗೆ ₹39 ಕೋಟಿ
* ಹಸಿರು ಸೂಚ್ಯಂಕ ಹೆಚ್ಚಳ 10 ಲಕ್ಷ ಸಸಿ ನೆಡುವ ಗುರಿ
* ರಾಜಕಾಲುವೆ ಹೂಳೆತ್ತಿ ನಿರ್ವಹಣೆಗೆ ₹60 ಕೋಟಿ
* ಬೆಂಗಳೂರು ನಗರ ವ್ಯಾಪ್ತಿಯ ಕೆರೆಗಳ ನಿರ್ವಹಣೆಗೆ ₹31 ಕೋಟಿ
* ಕೆರೆ ದತ್ತು ಯೋಜನೆ ಜಾರಿ
* 330 ಆಸನವಿರುವಂತೆ ಕೌನ್ಸಿಲ್ ಸಭಾಂಗಣ ಮೇಲ್ದರ್ಜೆಗೆ ಏರಿಸಲು ₹10 ಕೋಟಿ
* ಈ ವರ್ಷ 10 ಸಾವಿರ ಬೀದಿ ದೀಪ ಅಳವಡಿಕೆ
* ಆರ್ಥಿಕ ಸಂಕಷ್ಟ ಇರುವುದರಿಂದ ಕಲ್ಯಾಣ, ಶಿಕ್ಷಣ, ಆರೋಗ್ಯ, ಕೆರೆ ವಿಭಾಗ ಹೊರತಾಗಿ ಬೇರಾವುದೇ ವಿಭಾಗಕ್ಕೆ ಹೊಸ ಕಾರ್ಯಕ್ರಮ ಇಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.