ADVERTISEMENT

ಉಬರ್‌ನಿಂದ ಬೆಂಗಳೂರಿನಲ್ಲಿ ಮಹಿಳೆಯರಿಂದ ಮಹಿಳೆಯರಿಗಾಗಿ ಬೈಕ್ ಟ್ಯಾಕ್ಸಿ ಸೇವೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2024, 5:50 IST
Last Updated 13 ಡಿಸೆಂಬರ್ 2024, 5:50 IST
<div class="paragraphs"><p>ವಿಧಾನ ಸೌಧದ ಮುಂದೆ ಬೈಕ್ ಟ್ಯಾಕ್ಸಿ ಚಾಲಕಿಯರು</p></div>

ವಿಧಾನ ಸೌಧದ ಮುಂದೆ ಬೈಕ್ ಟ್ಯಾಕ್ಸಿ ಚಾಲಕಿಯರು

   

ಎಕ್ಸ್ ಚಿತ್ರ: @Uber_India

ಬೆಂಗಳೂರು: ಕೇವಲ ಮಹಿಳೆಯರಿಗೆ ಮಾತ್ರ ಮೀಸಲಾಗಿರುವ ‘ಮೋಟೊ ವಿಮೆನ್‌’ (Moto Women) ಬೈಕ್‌ ಟ್ಯಾಕ್ಸಿ ಸೇವೆಯನ್ನು ಉಬರ್ ಪರಿಚಯಿಸಿದೆ.

ADVERTISEMENT

ಗುರುವಾರ ಈ ಸೇವೆಯನ್ನು ಬೆಂಗಳೂರಿನಲ್ಲಿ ಪರಿಚಯಿಸಿದೆ.

ಮಹಿಳೆಯರೇ ಚಲಾಯಿಸುವ ಈ ಬೈಕ್ ಟ್ಯಾಕ್ಸಿಯಲ್ಲಿ ಮಹಿಳೆಯರಿಗೆ ಮಾತ್ರ ಬುಕ್ಕಿಂಗ್ ಮಾಡಲು ಅವಕಾಶ ಇದೆ.

ಮಹಿಳೆಯರಿಗೆ ಸುರಕ್ಷಿತ ಹಾಗೂ ಖಾಸಗಿತನ ರಕ್ಷಿಸುವ ಪ್ರಯಾಣ ಕಲ್ಪಿಸಲು ಹಾಗೂ ಚಾಲಕಿಯರು ದುಡಿಮೆ ಅವಕಾಶ ನೀಡಲು ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಉಬರ್ ಹೇಳಿದೆ.

ಈಗಾಗಲೇ 300 ಚಾಲಕಿಯರು ನೋಂದಾಯಿಸಿಕೊಂಡಿದ್ದಾರೆ. ಮಹಿಳಾ ಪ್ರಯಾಣಿಕರಿಂದ ಪಡೆದುಕೊಂಡ ಪ್ರತಿಕ್ರಿಯೆ ಅನುಸರಿಸಿ ಈ ಉಪಕ್ರಮ ಕೈಗೊಳ್ಳಲಾಗಿದೆ ಎಂದು ಉಬರ್ ತಿಳಿಸಿದೆ.

ಉಬರ್ ಆ್ಯಪ್‌ನಲ್ಲಿಯೇ ಈ ಹೊಸ ಸೇವೆ ದೊರೆಯಲಿದೆ. ಐದು ಮಂದಿಯೊಂದಿಗೆ ಪ್ರಯಾಣದ ವಿವರ ಹಂಚಿಕೊಳ್ಳುವ, ಫೋನ್ ಸಂಖ್ಯೆ, ಡ್ರಾಪ್ ಸ್ಥಳ ಗೋಪ್ಯವಾಗಿಡುವ ಸೌಲಭ್ಯ ಇದೆ. ದೀರ್ಘ ಸಮಯ ನಿಲ್ಲಿಸುವುದು, ದಾರಿ ಮಧ್ಯೆಯೇ ಡ್ರಾಪ್ ಮಾಡುವುದು, ಮಾರ್ಗ ಬದಲಾಯಿಸುವುದು ಮುಂತಾದವುಗಳ ಮೇಲ್ವಿಚಾರಣೆ ಕೂಡ ನಡೆಸಲಾಗುವುದು.

ಮಹಿಳೆಯರ ಸುರಕ್ಷತೆ ಹಾಗೂ ಗೋ‍ಪ್ಯತೆ ಕಾಪಾಡಿಕೊಳ್ಳಲು ಈ ಫೀಚರ್‌ಗಳನ್ನು ಪರಿಚಯಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.