
ಬಿಎಂಟಿಸಿ
ಬೆಂಗಳೂರು: ‘ಬಿಎಂಟಿಸಿಯ ಅಧಿಕೃತ ಯುಪಿಐ ಸ್ಕ್ಯಾನರ್ ಬದಲಿಗೆ ವೈಯಕ್ತಿಕ ಸ್ಕ್ಯಾನರ್ ಬಳಸಿ ಟಿಕೆಟ್ ನೀಡಿ, ಸಾರ್ವಜನಿಕ ಹಣ ದುರುಪಯೋಗ ಮಾಡಿದ ಆರೋಪದ ಮೇಲೆ ಮೂವರು ನಿರ್ವಾಹಕರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
‘2025ರ ಡಿಸೆಂಬರ್‌ನಲ್ಲಿ ಬಿಎಂಟಿಸಿ ಅಧಿಕಾರಿಗಳು ನಡೆಸಿದ್ದ ತಪಾಸಣೆ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ. ನಿರ್ವಾಹಕರಾದ ಸುರೇಶ್ ₹47,257, ಅಶ್ವಾಕ್ ಖಾನ್ ₹ 3,206 ಹಾಗೂ ಚಾಲಕ ಕಮ್ ನಿರ್ವಾಹಕ ಮಂಚೇಗೌಡ ₹ 54,358 ಹಣ ದುರುಪಯೋಗ ಮಾಡಿದ್ದಾರೆ. ಈಗಾಗಲೇ ಆರೋಪಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.
‘ಯುಪಿಐ ಪಾವತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಬಿಎಂಟಿಸಿಯಿಂದ ಸದ್ಯದಲ್ಲಿಯೇ ಡೈನಾಮಿಕ್ ಕ್ಯೂಆರ್ ಯುಪಿಐ ಪಾವತಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗುವುದು’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.