ADVERTISEMENT

ಪ್ರೇಮಿಗಳ ದಿನ: 5.15 ಲಕ್ಷ ಕೆ.ಜಿ ಗುಲಾಬಿ ಸಾಗಣೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2022, 21:09 IST
Last Updated 20 ಫೆಬ್ರುವರಿ 2022, 21:09 IST
ಗುಲಾಬಿ
ಗುಲಾಬಿ   

ಬೆಂಗಳೂರು: ಪ್ರೇಮಿಗಳ ದಿನಕ್ಕಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 5.15 ಲಕ್ಷ ಕೆ.ಜಿ.ಗಳಷ್ಟು ಗುಲಾಬಿಹೊರ ರಾಜ್ಯಗಳು ಹಾಗೂ ವಿದೇಶಗಳಿಗೆ ಸಾಗಣೆಯಾಗಿದೆ.

‘ಪ್ರತಿವರ್ಷ ಪ್ರೇಮಿಗಳ ದಿನಕ್ಕಾಗಿ ಬೆಂಗಳೂರಿನಿಂದ 25 ವಿಮಾನ ನಿಲ್ದಾಣಗಳಿಗೆ ಗುಲಾಬಿ ಸಾಗಣೆ ಮಾಡಲಾಗುತ್ತದೆ. ಕಳೆದ ವರ್ಷ 2.17 ಲಕ್ಷ ಕೆ.ಜಿ ಗುಲಾಬಿ ಇಲ್ಲಿಂದ ವಿವಿಧ ಸ್ಥಳಗಳಿಗೆ ತಲುಪಿತ್ತು. ಈ ಬಾರಿ ದುಪ್ಪಟ್ಟು ಹೆಚ್ಚಳ ಕಂಡಿದೆ. ಕಳೆದ ಬಾರಿ1.03 ಲಕ್ಷ ಕೆ.ಜಿ.ಯಷ್ಟಿದ್ದದೇಶಿಯ ಸಾಗಣೆಯೂ ಈ ವರ್ಷ 3.15 ಲಕ್ಷ ಕೆ.ಜಿ.ಗಳಿಗೆ ಏರಿದೆ’ ಎಂದು ಬಿಐಎಎಲ್ ಮುಖ್ಯ ಕಾರ್ಯತಂತ್ರ ಅಭಿವೃದ್ಧಿ ಅಧಿಕಾರಿ ಸಾತ್ಯಕಿ ರಂಗನಾಥ್ ತಿಳಿಸಿದರು.

‘ಗುಲಾಬಿ ರಫ್ತಿನಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ.ಪ್ರತಿ ವರ್ಷ ಗುಲಾಬಿ ರಫ್ತು ಪ್ರಮಾಣ ಹೆಚ್ಚುತ್ತಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ದೆಹಲಿ, ಮುಂಬೈ, ಕೋಲ್ಕತ್ತ, ಗುವಾಹಟಿ, ಚಂಡೀಗಡ, ಸಿಂಗಪುರ, ಲಂಡನ್, ದುಬೈ ಸೇರಿದಂತೆ ವಿವಿಧ ತಾಣಗಳಿಗೆ ಗುಲಾಬಿ ರಫ್ತು ಮಾಡಲಾಗಿದೆ’ ಎಂದರು.

ADVERTISEMENT

‘ವಿಮಾನ ನಿಲ್ದಾಣದಲ್ಲಿ60 ಸಾವಿರ ಟನ್‌ ಸಾಮರ್ಥ್ಯದ ಶೀತಲೀಕರಣ ಘಟಕದ ವ್ಯವಸ್ಥೆಯಿದ್ದು,ಕಡಿಮೆ ಬಾಳಿಕೆ ಅವಧಿಯ ಪದಾರ್ಥಗಳ ಸಾಗಣೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.