ADVERTISEMENT

ಕಳವಾಗಿದ್ದ 174 ವಾಹನಗಳು ಪೊಲೀಸರಿಂದ ಪತ್ತೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 21:44 IST
Last Updated 27 ನವೆಂಬರ್ 2020, 21:44 IST

ಬೆಂಗಳೂರು: 139 ಬೈಕ್ ಕಳವು ಪ್ರಕರಣಗಳ ಕಾರ್ಯಾಚರಣೆ ನಡೆಸಿದ ಆಗ್ನೇಯ ವಿಭಾಗದ ಪೊಲೀಸರು, 174 ಬೈಕ್‍ಗಳನ್ನು ವಶಕ್ಕೆ ಪಡೆದಿದ್ದಾರೆ. ಕಳವಾಗಿದ್ದ ವಾಹನಗಳನ್ನು ಪ್ರದರ್ಶಿಸಿದ ಬಳಿಕ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರು ಮಾಲೀಕರಿಗೆ ಹಸ್ತಾಂತರಿಸಿದರು.

ಮಡಿವಾಳ ಮತ್ತು ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗಗಳಲ್ಲಿ ನಡೆದಿದ್ದ ವಾಹನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರಾಜ್ಯ ಮತ್ತು ಅಂತರರಾಜ್ಯದ ಆರೋಪಿಗಳು ಸೇರಿದಂತೆ ಒಟ್ಟು 39 ಮಂದಿಯನ್ನು ಬಂಧಿಸಲಾಗಿದೆ.

139 ಪ್ರಕರಣಗಳ ಪೈಕಿ ಎಚ್‍ಎಸ್‍ಆರ್ ಬಡಾವಣೆ (33), ಬಂಡೇಪಾಳ್ಯ (34), ಬೇಗೂರು (35), ಆಡುಗೋಡಿ (13), ಹುಳಿಮಾವು (13), ಕೋರಮಂಗಲ (4), ಪರಪ್ಪನ ಅಗ್ರಹಾರ (3), ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ನಾಲ್ಕು ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ.

ADVERTISEMENT

ಆಗ್ನೇಯ ವಿಭಾಗದಲ್ಲಿ ಕಳ್ಳತನವಾದ ವಾಹನಗಳನ್ನು ಪತ್ತೆ ಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಪತ್ತೆಯಾಗಿರುವ ವಾಹನಗಳ ಮೌಲ್ಯ ಅಂದಾಜು ₹1.62 ಕೋಟಿ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.