ಬೆಂಗಳೂರಿನ ವಿಧಾನಸೌಧಕ್ಕೆ ಹೊಸದಾಗಿ ಅಳವಡಿಸಿರುವ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ದೃಶ್ಯ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ
ಪ್ರಜಾವಾಣಿ ಚಿತ್ರಗಳು: ಎಂ. ಎಸ್. ಮಂಜುನಾಥ್
ರಾಜ್ಯದ ಆಡಳಿತ ಕೇಂದ್ರವಾದ ವಿಧಾನ ಸೌಧದ ಅಂದವನ್ನು ಹೆಚ್ಚಿಸಲು ಬಣ್ಣಬಣ್ಣದ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಈ ಶಾಶ್ವತ ವ್ಯವಸ್ಥೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೀಘ್ರದಲ್ಲೇ ಚಾಲನೆ ನೀಡಲಿದ್ದಾರೆ. ಇತ್ತೀಚೆಗೆ ನಡೆಸಿದ ಪ್ರಾಯೋಗಿಕ ಪರೀಕ್ಷೆ ಸಂದರ್ಭದಲ್ಲಿ ಸೌಧವು ವರ್ಣರಂಜಿತ ಬೆಳಕಿನಿಂದ ಜಗಮಗಿಸಿದ ಚಿತ್ರಗಳು ಇಲ್ಲಿವೆ.
ಪ್ರಜಾವಾಣಿ ಚಿತ್ರಗಳು: ಎಂ. ಎಸ್. ಮಂಜುನಾಥ್
ವಿಧಾನ ಸೌಧಕ್ಕೆ ಇದುವರೆಗೆ ತಾತ್ಕಾಲಿಕವಾಗಿ ದೀಪಾಲಂಕಾರ ಮಾಡಲಾಗುತ್ತಿತ್ತು.
ರಾಜ್ಯದ ಆಡಳಿತ ಕೇಂದ್ರವಾದ ಈ ಸೌಧಕ್ಕೆ ಇದೀಗ, ಹೊಸದಾಗಿ ಶಾಶ್ವತ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ.
ವಿಧಾನಸೌಧದ ವಿದ್ಯುತ್ ದೀಪಗಳ ಪರೀಕ್ಷಾರ್ಥ ಪರಿಶೀಲನೆಯನ್ನು ಇತ್ತೀಚೆಗೆ ನಡೆಸಲಾಯಿತು.
ಹೊಸದಾಗಿ ಮಾಡಲಾಗಿರುವ ದೀಪಾಲಂಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೀಘ್ರದಲ್ಲೇ ಚಾಲನೆ ನೀಡಲಿದ್ದಾರೆ.
ಪ್ರತಿ ಶನಿವಾರ–ಭಾನುವಾರ ಹಾಗೂ ವಿಶೇಷ ದಿನಗಳಲ್ಲಿ ದೀಪಾಲಂಕಾರದಿಂದ ಝಗಮಗಿಸಲಿದೆ ವಿಧಾನಸೌಧ
ಇತ್ತೀಚೆಗೆ ನಡೆಸಿದ ಪರೀಕ್ಷಾರ್ಥ ಪರಿಶೀಲನೆ ವೇಳೆ ಸೌಧ ವರ್ಣರಂಜಿತ ಬೆಳಕಿನಿಂದ ಕಂಗೊಳಿಸಿದ್ದು ಹೀಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.