ADVERTISEMENT

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನದಲ್ಲಿ ಕರ್ತವ್ಯನಿರತ ಯೋಧನಿಗೆ ಬಾಲಕನ ಸೆಲ್ಯೂಟ್

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 16:37 IST
Last Updated 25 ಅಕ್ಟೋಬರ್ 2021, 16:37 IST
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ತವ್ಯನಿರತ ಯೋಧನಿಗೆ ಬಾಲಕನೊಬ್ಬ ಸೆಲ್ಯೂಟ್ ಮಾಡಿರುವುದು.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ತವ್ಯನಿರತ ಯೋಧನಿಗೆ ಬಾಲಕನೊಬ್ಬ ಸೆಲ್ಯೂಟ್ ಮಾಡಿರುವುದು.   

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ತವ್ಯನಿರತ ಯೋಧನಿಗೆ ಬಾಲಕನೊಬ್ಬ ಸೆಲ್ಯೂಟ್ ಮಾಡಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಆರ್‌ಪಿಎಫ್) ಸಿಬ್ಬಂದಿ, ನಿಲ್ದಾಣದ ಹೊರಭಾಗದ ರಸ್ತೆಯಲ್ಲಿ ಶಸ್ತ್ರಸಜ್ಜಿತ ವಾಹನದಲ್ಲಿ ನಿಂತು ಕಾವಲು ಕಾಯುತ್ತಿದ್ದರು. ಅದೇ ಸ್ಥಳಕ್ಕೆ ಪೋಷಕರ ಜೊತೆ ಬಂದಿದ್ದ ಬಾಲಕ, ಯೋಧನನ್ನು ನೋಡಿ ನಿಂತುಕೊಂಡಿದ್ದ.

ಕೆಲ ಕ್ಷಣ ಯೋಧನನ್ನು ನೋಡಿ ಶಿಸ್ತಿನಿಂದ ವರ್ತಿಸಿದ್ದ ಬಾಲಕ, ನಂತರ ಎದೆ ಉಬ್ಬಿಸಿ ಸೆಲ್ಯೂಟ್ ಮಾಡಿದ್ದ. ಇದಕ್ಕೆ ಪ್ರತಿಯಾಗಿ ಯೋಧ ಸಹ ಸೆಲ್ಯೂಟ್ ಹೊಡೆದರು. ಇದೇ ವಿಡಿಯೊವನ್ನು ಹಲವರು, ಸಾಮಾಜಿಕ ಮಾಧ್ಯಮಗಳನ್ನು ಹಂಚಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.