ADVERTISEMENT

ಮಾರತ್‌ಹಳ್ಳಿ to ವರ್ತೂರು ಕೋಡಿ: ದಟ್ಟಣೆ ನಿಯಂತ್ರಿಸಲು ಸಂಚಾರ ಮಾರ್ಪಾಡು

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 15:55 IST
Last Updated 25 ಜುಲೈ 2025, 15:55 IST
<div class="paragraphs"><p>ಸಂಚಾರ ದಟ್ಟಣೆ – ಪ್ರಾತಿಧಿಕ ಚಿತ್ರ</p></div>

ಸಂಚಾರ ದಟ್ಟಣೆ – ಪ್ರಾತಿಧಿಕ ಚಿತ್ರ

   

ಬೆಂಗಳೂರು: ವೈಟ್‌ಫೀಲ್ಡ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವರ್ತೂರು ಕೋಡಿಯಿಂದ ಮಾರತ್‌ಹಳ್ಳಿ ಕಡೆಗೆ ಮತ್ತು ಮಾರತ್‌ಹಳ್ಳಿಯಿಂದ ವರ್ತೂರು ಕೋಡಿ ಕಡೆಗೆ ಸಂಚಾರ ದಟ್ಟಣೆ ನಿಯಂತ್ರಿಸಲು ಪ್ರಾಯೋಗಿಕವಾಗಿ ಸಂಚಾರ ಮಾರ್ಪಾಡು ಮಾಡಲಾಗಿದೆ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.

ವಿಬ್‌ಗಯಾರ್ ‘ಯು’ ಟರ್ನ್ ನಿರ್ಬಂಧಿಸಲಾಗಿದೆ. ಮಾರತ್‌ಹಳ್ಳಿ ಮತ್ತು ಕುಂದಲಹಳ್ಳಿಯಿಂದ ವಿಬ್‌ಗಯಾರ್ ರಸ್ತೆ ಕಡೆಗೆ ಸಂಚರಿಸುವ ವಾಹನಗಳು ತೂಬರಹಳ್ಳಿ ಬಳಿ ಯು ಟರ್ನ್ ಪಡೆದು ಸಂಚರಿಸಬಹುದು ಎಂದು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.