ADVERTISEMENT

ಜಯನಗರದಲ್ಲಿ ವಚನಕಾರ್ತಿಯರ ಕಮ್ಮಟ ಫೆ.28ಕ್ಕೆ: ಮುಕ್ತಾ ಬಿ.ಕಾಗಲಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 1:13 IST
Last Updated 26 ಫೆಬ್ರುವರಿ 2026, 1:13 IST
   

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ 12ನೇ ಶತಮಾನದ ವಚನಕಾರ್ತಿಯರ ಕುರಿತು ಒಂದು ದಿನದ ಕಮ್ಮಟವನ್ನು ಫೆ.28ರಂದು ಜಯನಗರದ ಶ್ರೀ ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪದಲ್ಲಿ ಆಯೋಜಿಸಲಾಗಿದೆ.

ವಚನ ಸಾಹಿತ್ಯದಲ್ಲಿ ಹೆಚ್ಚು ಚರ್ಚೆಗೊಳಗಾಗದ ವಚನಕಾರ್ತಿಯರ ಮಹತ್ವದ ಕೊಡುಗೆಗಳನ್ನು ಪರಿಚಯಿಸುವುದು, ಅವರ ಚಿಂತನೆಗಳ ಸಾಂಸ್ಕೃತಿಕ ಸಾಮಾಜಿಕ ಪ್ರಾಸಂಗಿಕತೆ ಚರ್ಚಿಸುವುದು ಹಾಗೂ ಹೊಸಪೀಳಿಗೆಯಲ್ಲಿ ಈ ಪರಂಪರೆ ಕುರಿತು ಅರಿವು ಮೂಡಿಸುವುದು ಈ ಕಮ್ಮಟದ ಉದ್ದೇಶ ಎಂದು ಸಂಯೋಜಕಿ ಮುಕ್ತಾ ಬಿ.ಕಾಗಲಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ನಿವೃತ್ತ ಪ್ರಾಧ್ಯಾಪಕಿ ಎಂ.ಉಷಾ ಆಶಯ ನುಡಿ ಆಡಲಿದ್ದಾರೆ. ಬಳಿಕ ನಡೆಯುವ ಗೋಷ್ಠಿಗಳಲ್ಲಿ ಲೇಖಕಿಯರ ಸಂಘದ ರಾಜ್ಯ ಅಧ್ಯಕ್ಷೆ ಆರ್.ಸುನಂದಮ್ಮ, ಲೇಖಕಿಯರಾದ ಸುನಂದಾ ಬಸಪ್ಪ, ಇಂದಿರಾ ಶಿವಣ್ಣ ಅವರು ವಚನಕಾರ್ತಿಯರ ಸಾಹಿತ್ಯ ಮತ್ತು ಚಿಂತನೆಗಳ ವಿವಿಧ ಆಯಾಮ ವಿಶ್ಲೇಷಿಸಲಿದ್ದಾರೆ.

ADVERTISEMENT

ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಸಿ.ಸೋಮಶೇಖರ್ ಸಮಾರೋಪ ಭಾಷಣ ಮಾಡಲಿದ್ದು, ಪತ್ರಕರ್ತೆ ಆರ್. ಪೂರ್ಣಿಮಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.