ADVERTISEMENT

ಪ್ರಜಾವಾಣಿ@75: ರಾಜಧಾನಿಯಲ್ಲಿ ನೀರಿಗಾಗಿ ನಡಿಗೆ 

ವಿಶ್ವಜಲ ದಿನದ ಅಂಗವಾಗಿ ವಾಕಥಾನ್: ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ಸಂಚಾರ ವಿಭಾಗದ ವಿಶೇಷ ಕಮಿಷನರ್‌ ಎಂ.ಎ.ಸಲೀಂ, ನಟ ರಿಷಿ ಅವರಿಂದ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 3:28 IST
Last Updated 1 ಏಪ್ರಿಲ್ 2023, 3:28 IST
ವಿಶ್ವಜಲ ದಿನದ ಅಂಗವಾಗಿ ವಾಕಥಾನ್: ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ಸಂಚಾರ ವಿಭಾಗದ ವಿಶೇಷ ಕಮಿಷನರ್‌ ಎಂ.ಎ.ಸಲೀಂ, ನಟ ರಿಷಿ ಅವರಿಂದ ಚಾಲನೆ
ವಿಶ್ವಜಲ ದಿನದ ಅಂಗವಾಗಿ ವಾಕಥಾನ್: ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ಸಂಚಾರ ವಿಭಾಗದ ವಿಶೇಷ ಕಮಿಷನರ್‌ ಎಂ.ಎ.ಸಲೀಂ, ನಟ ರಿಷಿ ಅವರಿಂದ ಚಾಲನೆ   

ಬೆಂಗಳೂರು: ಪ್ರಜಾವಾಣಿ@75 ಸಂಭ್ರಮದಲ್ಲಿದ್ದು, ರಾಜಧಾನಿಯಲ್ಲಿ ಶನಿವಾರ ಬೆಳಿಗ್ಗೆ ವಾಕಥಾನ್‌ಗೆ ಚಾಲನೆ ನೀಡಲಾಯಿತು.
ವಿಶ್ವಜಲದ ಅಂಗವಾಗಿ ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ ಆಯೋಜಿಸಿದ್ದ ನೀರಿಗಾಗಿ ನಡಿಗೆಯಲ್ಲಿ ಸಿಲಿಕಾನ್ ಸಿಟಿಯ ನಡಿಗೆದಾರರು ಬೆಳಿಗ್ಗೆಯೇ ಲಗುಬಗೆಯಿಂದ ಪಾಲ್ಗೊಂಡಿದ್ದರು.

ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಹಾಗೂ ಸಂಚಾರ ವಿಭಾಗದ ವಿಶೇಷ ಕಮಿಷನರ್ ಎಂ.ಎ.ಸಲೀಂ, ನಟ ರಿಷಿ ಅವರು ಟ್ರಿನಿಟಿ ವೃತ್ತದಲ್ಲಿ ಚಾಲನೆ ನೀಡಿ ನಡಿಗೆದಾರರಿಗೆ ಶುಭ ಹಾರೈಸಿದರು. ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಡೆಪ್ಯುಟಿ ಎಡಿಟರ್ ಎಂ.ನಾಗರಾಜ್, ಪ್ರಸರಣ ವಿಭಾಗದ ಜಿಎಂ ಆಲಿವರ್ ಲೆಸ್ಲೆ ಹಾಜರಿದ್ದರು.

ಇದೇ ವೇಳೆ ನಾನು ಎಲ್ಲ ಸಂಚಾರ ನಿಯಮಗಳನ್ನೂ ಪಾಲಿಸುತ್ತೇನೆ ಹಾಗೂ ಯಾವತ್ತೂ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತೇನೆ ಎಂಬ ಫಲಕಕ್ಕೆ ನಡಿಗೆದಾರರು ಸಹಿ ಹಾಕಿದರು.

ADVERTISEMENT

ನೀರಿನ ಮಹತ್ವದ ಬಗ್ಗೆ ಎಲ್ಲರಲ್ಲೂ ಅರಿವು ಮುಖ್ಯ.‌ ನೀರು ಅಮೂಲ್ಯ ಸಂಪತ್ತು. ನೀರನ್ನು ಹಿತಮಿತವಾಗಿ ಬಳಸಬೇಕು. ನೀರಿನ ಬಗ್ಗೆ ಜಾಗೃತಿ‌ ಮೂಡಿಸಲು ಪ್ರಜಾವಾಣಿ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಶಿಕ್ಷಕಿ ಲಾವಣ್ಯ ಸಂಭ್ರಮ ಹಂಚಿಕೊಂಡರು.
ನಗರದ ವಿವಿಧ ಭಾಗದ ನಡಿಗೆದಾರರು ಪಾಲ್ಗೊಂಡಿದ್ದರು.

ಪಿಇಎಸ್ ಕಾಲೇಜು ವಿದ್ಯಾರ್ಥಿಗಳು ಈ ನಡಿಗೆಯಲ್ಲಿ ಭಾಗಿಯಾಗಿ ನಮ್ಮ ಭವಿಷ್ಯಕ್ಕಾಗಿ ನೀರು ಉಳಿಸಿ ಎಂದು ಘೋಷಣೆ ಕೂಗಿದರು.
ಜಲ ರಕ್ಷಣೆ ನಮ್ಮೆಲ್ಲರ ಹೊಣೆ, ನೆಮ್ಮದಿಯ ನಾಳೆಗೆ ಇರಲಿ ಉಳಿತಾಯದ ಸಂಕಲ್ಪ, ಉಳಿದರೆ ನೀರು ನೆಮ್ಮದಿಯ ತೇರು, ಬದುಕಲು ಮನುಕುಲ ಬೇಕೇ ಬೇಕು ನೀರು ಎನ್ನುವ ಘೋಷಣೆಯುಳ್ಳ ಭಿತ್ತಿಪತ್ರ ಹಿಡಿದು ನಡಿಗೆದಾರರು ಸಾಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.