ADVERTISEMENT

ಬಸವಕಲ್ಯಾಣ: 56 ಟನ್ ಅಕ್ಕಿ ಜಪ್ತಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 9:19 IST
Last Updated 20 ಡಿಸೆಂಬರ್ 2019, 9:19 IST
ಬಸವಕಲ್ಯಾಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಚೆಗೆ ವಶಪಡಿಸಿಕೊಂಡಿರುವ ಅಕ್ರಮ ಪಡಿತರ ಅಕ್ಕಿಯ ಲಾರಿಯೊಂದಿಗೆ ಆಹಾರ ನಿರೀಕ್ಷಕರಾದ ರಾಮರತನ್ ದೇಗಲೆ, ನೀಲಮ್ಮ ಗಾಯಕವಾಡ ಅವರನ್ನು ಕಾಣಬಹುದು
ಬಸವಕಲ್ಯಾಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಚೆಗೆ ವಶಪಡಿಸಿಕೊಂಡಿರುವ ಅಕ್ರಮ ಪಡಿತರ ಅಕ್ಕಿಯ ಲಾರಿಯೊಂದಿಗೆ ಆಹಾರ ನಿರೀಕ್ಷಕರಾದ ರಾಮರತನ್ ದೇಗಲೆ, ನೀಲಮ್ಮ ಗಾಯಕವಾಡ ಅವರನ್ನು ಕಾಣಬಹುದು   

ಬಸವಕಲ್ಯಾಣ: ಇಲ್ಲಿನ ಆಹಾರ ಇಲಾಖೆ ಅಧಿಕಾರಿಗಳು ಎರಡು ಕಡೆ ದಾಳಿ ನಡೆಸಿ, ಅಕ್ರಮವಾಗಿ ಸಾಗಿಸುತ್ತಿದ್ದ ‌56 ಟನ್ ಪಡಿತರ ಅಕ್ಕಿಯನ್ನು ಈಚೆಗೆ ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ₹16.86 ಲಕ್ಷ ಎಂದು ಅಂದಾಜಿಸಲಾಗಿದೆ.

ಇಲ್ಲಿಗೆ ಸಮೀಪದ 65ನೇ ರಾಷ್ಟ್ರೀಯ ಹೆದ್ದಾರಿಯಿಂದ ಗುಜರಾತ್‌ಗೆ ಸಾಗಿಸುತ್ತಿದ್ದ ₹9 ಲಕ್ಷ ಮೌಲ್ಯದ 30 ಟನ್ ಅಕ್ಕಿ ತುಂಬಿದ ಲಾರಿಯನ್ನು ಗುರುದೀಪ ದಾಬಾ ಸಮೀಪ ಜಪ್ತಿ ಮಾಡಿಕೊಳ್ಳಲಾಗಿದೆ. ಅದೇ ದಿನ ಇದೇ ಹೆದ್ದಾರಿಯಿಂದ ಗುಜರಾತ್‌ಗೆ ಸಾಗಿಸುತ್ತಿದ್ದ ₹7.86 ಲಕ್ಷ ಮೌಲ್ಯದ 26 ಟನ್ ಅಕ್ಕಿಯನ್ನು ತಡೋಳಾ ಹತ್ತಿರ ಜಪ್ತಿ ಮಾಡಿಕೊಳ್ಳಲಾಗಿದೆ.

ತಹಶೀಲ್ದಾರ್ ಸಾವಿತ್ರಿ ಸಲಗರ ಹಾಗೂ ಆಹಾರ ನಿರೀಕ್ಷಕರಾದ ರಾಮರತನ್ ದೇಗಲೆ ಮತ್ತು ನೀಲಮ್ಮ ಗಾಯಕವಾಡ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಅಕ್ಕಿ ಜಪ್ತಿ ಮಾಡಿದೆ. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.