ADVERTISEMENT

ಬೀದರ್| ಎಲ್ಲರ ಹಿತ ಬಯಸಿದ್ದ ಬಹಮನಿ ಅರಸರು: ಮುಹಮ್ಮದ್ ನಸಿಮುದ್ದೀನ್ ಫರೀಸ್

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 5:01 IST
Last Updated 3 ಫೆಬ್ರುವರಿ 2026, 5:01 IST
ಬೀದರ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ನಿವೃತ್ತ ಡೀನ್‌ ಮುಹಮ್ಮದ್‌ ನಸಿಮುದ್ದೀನ್‌ ಫರೀಸ್‌ ಮಾತನಾಡಿದರು
ಬೀದರ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ನಿವೃತ್ತ ಡೀನ್‌ ಮುಹಮ್ಮದ್‌ ನಸಿಮುದ್ದೀನ್‌ ಫರೀಸ್‌ ಮಾತನಾಡಿದರು    

ಬೀದರ್: ಬಹಮನಿ ಅರಸರು ತಮ್ಮ ಆಳ್ವಿಕೆಯಲ್ಲಿ ಎಲ್ಲರ ಹಿತ ಬಯಸಿದ್ದರು ಎಂದು ಹೈದರಾಬಾದ್‌ನ ಮೌಲಾನಾ ಆಜಾದ್ ಉರ್ದು ವಿಶವ್ವಿದ್ಯಾಲಯದ ನಿವೃತ್ತ ಡೀನ್ ಮುಹಮ್ಮದ್ ನಸಿಮುದ್ದೀನ್ ಫರೀಸ್ ಹೇಳಿದರು.

ಜಮಾ ಅತೆ ಇಸ್ಲಾಮಿ ಹಿಂದ್‌ನ ತಹಕೀಕ್- ಒ-ತಸ್ನೀಫ್ ವತಿಯಿಂದ ನಗರದ ಮೊಘಲ್ ಗಾರ್ಡನ್ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ‘ಬಹಮನಿ ಯುಗ: ರಾಜಕೀಯ, ಸಾಮಾಜಿಕ, ಸಾಹಿತ್ಯ, ಶಿಕ್ಷಣ ಹಾಗೂ ಅಭಿವೃದ್ಧಿ’ ವಿಮರ್ಶೆ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು.

ಬಹಮನಿ ಅರಸರು ಎಲ್ಲ ಧರ್ಮ ಹಾಗೂ ವರ್ಗಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸಿದ್ದರು. ನೆರೆ ರಾಜ್ಯಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಶಾಂತಿ ಸ್ಥಾಪಿಸಿದ್ದರು ಎಂದು ತಿಳಿಸಿದರು.

ADVERTISEMENT

ಶಿಕ್ಷಣಕ್ಕಾಗಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ್ದರು. ಉರ್ದು ಭಾಷೆ, ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿದ್ದರು. ಇರಾನ್, ಇರಾಕ್, ಸಿರಿಯಾದಿಂದ ಇಸ್ಲಾಮಿ ವಿದ್ವಾಂಸರನ್ನು ಕರೆಸಿ ಆಧ್ಯಾತ್ಮ ಪ್ರಗತಿಗೂ ಪ್ರಯತ್ನಿಸಿದ್ದರು ಎಂದು ಹೇಳಿದರು.

ಕರೇಜ್ ವ್ಯವಸ್ಥೆ ಅನುಷ್ಠಾನಗೊಳಿಸಿದ್ದರು. ಅದರಿಂದ ನೀರಿನ ಸಂರಕ್ಷಣೆ ಸಾಧ್ಯವಾಗಿತ್ತು. ಬಹಮನಿ ಸಾಮ್ರಾಜ್ಯದಲ್ಲಿ ವಿದ್ವಾಂಸರು, ಇತಿಹಾಸ ತಜ್ಞರು, ತತ್ವಜ್ಞಾನಿಗಳು ಇದ್ದರು ಎಂದು ಹೇಳಿದರು.

ಜಮಾ ಅತೆ ಇಸ್ಲಾಮಿ ಹಿಂದ್‌ನ ರಾಜ್ಯ ಕಾರ್ಯದರ್ಶಿ ಲಬೀದ್ ಶಾಫಿ ಮಾತನಾಡಿ, ಇತಿಹಾಸ ಅರಿಯದವರು ಇತಿಹಾಸ ನಿರ್ಮಿಸಲಾರರು. ಹೀಗಾಗಿ ಎಲ್ಲರೂ ಇತಿಹಾಸ ತಿಳಿಯಬೇಕು. ಪ್ರಸ್ತುತ ಕೆಲ ಕೋಮುವಾದಿ ಶಕ್ತಿಗಳು ಇತಿಹಾಸವನ್ನು ಸಮಾಜದಲ್ಲಿ ದ್ವೇಷ ಹರಡಲು ಬಳಸುತ್ತಿವೆ ಎಂದರು.

ಹೈದರಾಬಾದ್‌ನ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮುಹಮ್ಮದ್ ಫಹಿಮುದ್ದೀನ್, ಹೈದರಾಬಾದ್‌ನ ಕೇಂದ್ರೀಯ ವಿಶ್ವವಿದ್ಯಾಲಯದ ರೈಸ್ ಫಾತಿಮಾ, ಮಂಜೂರ ಅಹಮ್ಮದ್, ಅಬ್ದುಲ್ ಮಜೀದ್, ಮುಹಮ್ಮದ್ ಸಮಿವುದ್ದೀನ್, ಮೈಮೂನಾ ಬೇಗಂ, ಮುಹಮ್ಮದ್ ಮಜೀದ್, ಇಸ್ಮಾಯಿಲ್ ಖಾನ್, ಮುಸ್ತಾಕ್ ಅಹಮ್ಮದ್  ಮಾತನಾಡಿದರು.

ಜಮಾ ಅತೆ ಇಸ್ಲಾಮಿ ಹಿಂದ್‌ನ ತಹಕೀಕ್-ಒ-ತಸ್ನೀಫ್ ವಿಭಾಗದ ಮುಖ್ಯಸ್ಥ ಶಂಶುದ್ದೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಮಾ ಅತೆ ಇಸ್ಲಾಮಿ ಹಿಂದ್‌ನ ಸ್ಥಳೀಯ ಘಟಕದ ಅಧ್ಯಕ್ಷ ಮುಹಮ್ಮದ್ ಮೌಅಝಂ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸಕಾರ ಅಬ್ದುಲ್ ಸಮದ್ ಭಾರತಿ, ಜಮಾ ಅತೆ ಇಸ್ಲಾಮಿ ಹಿಂದ್‌ನ ಜಿಲ್ಲಾ ಸಂಚಾಲಕ ಇಕ್ಬಾಲ್ ಗಾಝಿ, ರಾಜ್ಯ ಸಲಹಾ ಮಂಡಳಿ ಸದಸ್ಯ ಮುಹಮ್ಮದ್ ಆಸಿಫುದ್ದೀನ್, ಇರ್ಷಾದ್ ನವೀದ್, ಮುಹಮ್ಮದ್ ಸಲಾವುದ್ದೀನ್, ಹಷ್ಮತ್ ಫಾತೆಹಖಾನಿ, ನಿಷಾತ್ ಅಹಮ್ಮದ್, ಮುಹಮ್ಮದ್ ಖಾಲಿದ್ ಮುಬಸ್ಸಿರುಝಪರ್ ಇದ್ದರು.

ಆರಂಭದಲ್ಲಿ ಹಾಫಿಝ್ ಸೈಯ್ಯದ್ ಅತೀಕುಲ್ಲಾಹ ಅವರು ಕುರ್‌ಆನ್ ಪಠಣ ಮಾಡಿದರು.
ಮುಹಮ್ಮದ್ ರಫೀಕ್, ಇಸ್ಮಾಯಿಲ್ ಖಾನ್, ಮುಹಮ್ಮದ್ ಜಮೀಲ್ ಅಹಮ್ಮದ್, ಮುಹಮ್ಮದ್ ಎಹತೆಶಾಮ್ ನಿರೂಪಿಸಿದರು. ಮುಹಮ್ಮದ್ ಆರಿಫುದ್ದೀನ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.