ADVERTISEMENT

ಸತತ ಮಳೆಗೆ ಕುಸಿದು ಬಿದ್ದ ಬೀದರ್ ಕೋಟೆ ಗೋಡೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 4:12 IST
Last Updated 29 ಆಗಸ್ಟ್ 2025, 4:12 IST
   

ಬೀದರ್: ಸತತ ಮಳೆಗೆ ನಗರದ ಬಹಮನಿ ಕೋಟೆಯ ಗೋಡೆ ಕುಸಿದು ಬಿದ್ದಿದೆ.

ಕೋಟೆಯ ಕಂದಕ ಭಾಗದ ಒಂದು ಭಾಗ ಕುಸಿದು ಬಿದ್ದಿದೆ. ಈ ಭಾಗದಲ್ಲಿ ಜನರ ಓಡಾಟ ಇರದ ಕಾರಣ ಯಾರಿಗೂ ಯಾವುದೇ ತೊಂದರೆ ಆಗಿಲ್ಲ.

ಆಗಸ್ಟ್ ೨೬ರಂದು ಆರಂಭಗೊಂಡ ಮಳೆ ಆಗಸ್ಟ್ ೨೮ರ ರಾತ್ರಿ ತನಕ ಎಡೆಬಿಡದೆ ಸುರಿದಿದ್ದು, ಶುಕ್ರವಾರ ಬಿಡುವು ಕೊಟ್ಟಿದೆ.‌ಆದರೆ, ದಟ್ಟ ಕಾರ್ಮೋಡ ಆವರಿಸಿ, ತಂಪು ಗಾಳಿ ಬೀಸುತ್ತಿದೆ.

ADVERTISEMENT

ಎರಡ್ಮೂರು ದಿನಗಳವರೆಗೆ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.