ADVERTISEMENT

ಸಿಬಿಎಸ್‌ಇ ಫಲಿತಾಂಶ: ಜ್ಞಾನಸುಧಾ ವಿದ್ಯಾಲಯಕ್ಕೆ ಶೇ 100 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 14 ಮೇ 2024, 16:19 IST
Last Updated 14 ಮೇ 2024, 16:19 IST
<div class="paragraphs"><p>ಸಿಬಿಎಸ್‌ಇ ಹತ್ತನೇ ತರಗತಿಯಲ್ಲಿ ಉತ್ತಮ ಸಾಧನೆ ತೋರಿದ ಸಂಸ್ಥೆಯ ಮಕ್ಕಳನ್ನು ಬೀದರ್‌ನ ಜ್ಞಾನಸುಧಾ ವಿದ್ಯಾಲಯದಲ್ಲಿ ಮಂಗಳವಾರ ಗೌರವಿಸಲಾಯಿತು</p></div>

ಸಿಬಿಎಸ್‌ಇ ಹತ್ತನೇ ತರಗತಿಯಲ್ಲಿ ಉತ್ತಮ ಸಾಧನೆ ತೋರಿದ ಸಂಸ್ಥೆಯ ಮಕ್ಕಳನ್ನು ಬೀದರ್‌ನ ಜ್ಞಾನಸುಧಾ ವಿದ್ಯಾಲಯದಲ್ಲಿ ಮಂಗಳವಾರ ಗೌರವಿಸಲಾಯಿತು

   

ಬೀದರ್: ಪ್ರಸಕ್ತ ಸಾಲಿನ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 10ನೇ ತರಗತಿ ಪರೀಕ್ಷೆಯಲ್ಲಿ ನಗರದ ಜ್ಞಾನಸುಧಾ ವಿದ್ಯಾಲಯ ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿದೆ.

ವಿದ್ಯಾಲಯದ ವಿದ್ಯಾರ್ಥಿನಿ ಸೃಷ್ಟಿ ಶಿವಾನಂದ ಅವರು ಶೇ 98ರಷ್ಟು ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಬಂದಿದ್ದಾರೆ. ಕನ್ನಡದಲ್ಲಿ 100, ವಿಜ್ಞಾನ ಮತ್ತು ಸಮಾಜ ವಿಜ್ಞಾನದಲ್ಲಿ ತಲಾ 99, ಗಣಿತ ಮತ್ತು ಇಂಗ್ಲಿಷ್ ವಿಷಯದಲ್ಲಿ ತಲಾ 95 ಅಂಕ ಗಳಿಸಿದ್ದಾರೆ. 

ADVERTISEMENT

ಶಾಲೆಯ ಒಟ್ಟು 183 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 118 ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 59 ವಿದ್ಯಾರ್ಥಿಗಳು ಪ್ರಥಮ ದರ್ಜೆ, ಆರು ಜನರು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ವಿದ್ಯಾರ್ಥಿಗಳಾದ ವಿದ್ಯಾಧರ್ ರಾಮಪ್ಪ ಸಾವಳಗಿ (ಶೇ 96), ಪ್ರತೀಕ್ ಮಾಣಿಕ ರೆಡ್ಡಿ (ಶೇ. 95.8), ಹರ್ಷ ಪ್ರವೀಣ ಮಠಪತಿ (ಶೇ. 95.4), ರಿಷಬ್ ರಾಘವೇಂದ್ರ ಪಾಟೀಲ (ಶೇ. 95.2), ಅಭಿನವ್ ಪ್ರಕಾಶ್ (ಶೇ. 95), ಶ್ರದ್ಧಾ ಅಮಿತ್ (ಶೇ.94.6), ಅವನಿ ಸಿದ್ರಾಮಪ್ಪ ಆನಂದೆ (ಶೇ. 94.4), ಜಾನವಿ ಪ್ರವೀಣಕುಮಾರ್ (ಶೇ. 94.4), ಸಾನವಿ ವಿಜಯಕುಮಾರ ಕೋಟೆ (ಶೇ. 94.4), ಕೋಮಲ್ ವಿನೋದ್ (ಶೇ 94.2), ರಿದ್ಧಿ ಪಾಂಡೆ ಮನೋಜಕುಮಾರ್ ಪಾಂಡೆ (ಶೇ. 94), ಶ್ರದ್ಧಾ ಶಿವಕುಮಾರ ಸ್ವಾಮಿ (ಶೇ.93.2), ಮೊಹಮ್ಮದ್ ಅಜಾನ ಅಮೀನ್ ಮೊಹಮ್ಮದ್ ಮುನಿಮುದ್ದೀನ್ (ಶೇ.93.2), ಜೋಯ್ಸಿ ಮೇರಿ ಶಶಿಕಾಂತ (ಶೇ. 93), ಸೃಷ್ಟಿ ನಾಗರಾಜ್ ಬಿರಾದಾರ (ಶೇ 92.8), ವಿದ್ಯಾಶ್ರೀ ಲಕ್ಷ್ಮಿಕಾಂತ ಜೋಶಿ (ಶೇ. 92.4), ಚಿನ್ಮಯ್ ಸಂತೋಷಕುಮಾರ (ಶೇ.92.2), ಹರ್ಷಿತಾ ಆಕಾಶಕುಮಾರ (ಶೇ. 92.2), ಕೀರ್ತನಾ ಕಿರಣ (ಶೇ.92), ಸೃಷ್ಟಿ ಸಂತೋಷ್ (ಶೇ.92), ಪಾಟ್ಲೊಲ್ಲಾ ತನವಿ ರೆಡ್ಡಿ (ಶೇ. 91.8), ನಿತೀನ್ ವಿದ್ಯಾಸಾಗರ (ಶೇ 91.6), ಅಭಿನವ್ ಶಿವಕುಮಾರ ನೇಳಗಿ (ಶೇ. 91.4), ಸಂಗಮೇಶ್ ಮಹಾಂತೇಶ್ (ಶೇ. 91.4), ಸಾಯಿದರ್ಶನ ಬಸವರಾಜ ಬುಳ್ಳಾ (ಶೇ. 91), ಪ್ರಜ್ವಲ್ ರಾಜಕುಮಾರ (ಶೇ. 90.6), ಸಾತ್ವಿಕಾ ಕೇಶವ್ ಕುಲಕರ್ಣಿ (ಶೇ. 90.6), ಮೃದಾನಿ ಸದಾನಂದ ಕುಲಕರ್ಣಿ (ಶೇ. 90.4), ವೇದಾಂತ್ ಮಹೇಶ್ (ಶೇ.90.4) ಅಂಕ ಗಳಿಸಿದ್ದಾರೆ.

ನಗರದ ಮಾಮನಕೇರದಲ್ಲಿರುವ ಜ್ಞಾನಸುಧಾ ವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ ಸಮಾರಂಭದಲ್ಲಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಅಧ್ಯಕ್ಷೆ ಪೂರ್ಣಿಮಾ ಜಿ. ಮಾತನಾಡಿ, ‘ಪ್ರಸಕ್ತ ಸಾಲಿನ 10ನೇ ತರಗತಿ ಪರೀಕ್ಷೆಯಲ್ಲಿ ನಮ್ಮ ವಿದ್ಯಾಲಯದ ವಿದ್ಯಾರ್ಥಿನಿ ಸೃಷ್ಟಿ ಶಿವಾನಂದ ಅವರು ಶೇ 98 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ನಮ್ಮ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುತ್ತಿರುವ ಕಾರಣ, ಶಿಕ್ಷಕರ ಪರಿಶ್ರಮ ಹಾಗೂ ಪಾಲಕರ ಸಹಕಾರದಿಂದಾಗಿ ಈ ವರ್ಷದ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ’ ಎಂದು ತಿಳಿಸಿದರು.

ಸಂಸ್ಥೆಯ ನಿರ್ದೇಶಕ ಮುನೇಶ್ವರ ಲಾಖಾ ಮಾತನಾಡಿ, ಹತ್ತನೇ ತರಗತಿಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳು ಉತ್ತಮ ಪಿಯು ಕಾಲೇಜು ಆಯ್ಕೆ ಮಾಡಿಕೊಂಡು, ಇದೇ ರೀತಿ ಸಾಧನೆ ಮಾಡಬೇಕು ಎಂದು ಹೇಳಿದರು.

ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಶ್ರೀಕಾಂತ ರೆಡ್ಡಿ, ಜ್ಞಾನಸುಧಾ ವಿದ್ಯಾಲಯದ ಪ್ರಾಚಾರ್ಯೆ ಸುನೀತಾ ಸ್ವಾಮಿ, ಮೇಲ್ವಿಚಾರಕಿಯರಾದ ರಜನಿ, ಸಾಯಿಗೀತಾ ಹಾಜರಿದ್ದರು.

ಸೃಷ್ಟಿ ಶಿವಾನಂದ
‘ಟ್ಯೂಷನ್‌ ಹೋಗಿಲ್ಲ ಶಿಕ್ಷಕರ ಮಾರ್ಗದರ್ಶನದಂತೆ ಓದಿದೆ’
‘ನಾನು ಪ್ರತಿದಿನ ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡಿದ ವಿಷಯವನ್ನು ಚೆನ್ನಾಗಿ ಗ್ರಹಿಸಿಕೊಂಡು ಅಂದೇ ಅಭ್ಯಾಸ ಮಾಡುತ್ತಿದ್ದೆ. ಯಾವುದೇ ರೀತಿಯ ಟ್ಯೂಷನ್‌ಗೆ ಹೋಗದೆ ಶಿಕ್ಷಕರ ಮಾಡಿರುವ ಮಾರ್ಗದರ್ಶನದಂತೆ ಮನೆಯಲ್ಲೇ ವೈಯಕ್ತಿಕವಾಗಿ ಅಭ್ಯಾಸ ಮಾಡಿದ ಕಾರಣ ಈ ಸಾಧನೆ ಮಾಡಲು ಸಾಧ್ಯವಾಗಿದೆ’ ಎಂದು ಜಿಲ್ಲೆಯ ಟಾಪರ್ ಆಗಿ ಹೊರಹೊಮ್ಮಿದ ವಿದ್ಯಾರ್ಥಿನಿ ಸೃಷ್ಟಿ ಶಿವಾನಂದ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.