ADVERTISEMENT

ಬಸವಕಲ್ಯಾಣ: ಮಳೆಗೆ ಮನೆ ಚಾವಣಿ ಕುಸಿತ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 6:17 IST
Last Updated 23 ಜುಲೈ 2021, 6:17 IST
ಬಸವಕಲ್ಯಾಣ ತಾಲ್ಲೂಕಿನ ಅತ್ಲಾಪುರದ ಮಹಾನಂದ ಪಂಚಾಳ ಅವರ ಮನೆಯ ಚಾವಣಿ ಮಳೆಯಿಂದಾಗಿ ಕುಸಿದಿದೆ
ಬಸವಕಲ್ಯಾಣ ತಾಲ್ಲೂಕಿನ ಅತ್ಲಾಪುರದ ಮಹಾನಂದ ಪಂಚಾಳ ಅವರ ಮನೆಯ ಚಾವಣಿ ಮಳೆಯಿಂದಾಗಿ ಕುಸಿದಿದೆ   

ಬಸವಕಲ್ಯಾಣ: ಸತತವಾಗಿ ಮಳೆ ಸುರಿಯುತ್ತಿರುವ ಕಾರಣ ಕೆಲ ಗ್ರಾಮಗಳಲ್ಲಿನ ಮನೆಗಳ ಚಾವಣಿ ಹಾಗೂ ಗೋಡೆ ಕುಸಿದಿವೆ.

ಅತ್ಲಾಪುರ ಗ್ರಾಮದ ಮಹಾನಂದ ಪಂಚಾಳ ಅವರ ಮನೆಯ ಚಾವಣಿ ಕುಸಿದಿದೆ. ಇವರಿಗೆ ವಾಸಕ್ಕೆ ಇದೊಂದೇ ಕೊಠಡಿ ಇದೆ. ಆದ್ದರಿಂದ ಚಾವಣಿ ಕುಸಿದ ಕಾರಣ ತೊಂದರೆಯಲ್ಲಿದ್ದಾರೆ. ಈ ಕಾರಣ ಸಂಬಂಧಿತರು ಪರಿಹಾರ ಧನ ನೀಡಬೇಕು ಹಾಗೂ ಮನೆ ಮಂಜೂರು ಮಾಡಬೇಕು ಎಂದು ಕರ್ನಾಟಕ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಅನಿಲ ಮರ್ಪಳ್ಳೆ ಆಗ್ರಹಿಸಿದ್ದಾರೆ.

ನಾರಾಯಣಪುರ, ಉಜಳಂಬ, ಮಂಠಾಳಗಳಲ್ಲಿ ಮನೆ ಗೋಡೆಗಳ ಕಲ್ಲುಗಳು ಕುಸಿದಿರುವ ಬಗ್ಗೆ ತಿಳಿದು ಬಂದಿದೆ. ಪ್ರತಾಪುರ, ಮೋರಖಂಡಿ, ಕೊಹಿನೂರ ರಸ್ತೆಗಳಲ್ಲಿ ಮಳೆ ನೀರಿನಿಂದ ತಗ್ಗುಗುಂಡಿಗಳು ಬಿದ್ದಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.