ಪ್ರಾತಿನಿಧಿಕ ಚಿತ್ರ
ಬಸವಕಲ್ಯಾಣ: ತಾಲ್ಲೂಕಿನ ಕೊಹಿನೂರ ಪಹಾಡ ಹತ್ತಿರದಲ್ಲಿ ರಾಜೀವ ಕಾಂತಪ್ಪ (28) ಮತ್ತು ಅವರ ಪತ್ನಿ ಶಾರದಾ (23) ಇವರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.
ಮೃತರು ತಾಲ್ಲೂಕಿನ ಜಾಫರವಾಡಿ ಗ್ರಾಮದವರು. ಎರಡು ವರ್ಷದಿಂದ ಮುಂಬೈನಲ್ಲಿ ವಾಸಿಸುತ್ತಿದ್ದರು.
ಆದರೆ, ರಾಜೀವ ಮೊದಲಿನಿಂದಲೂ ಕೊಲೆ ಮಾಡಿದವನ ಸಹೋದರಿಯ ಜೊತೆಯಲ್ಲಿ ಅನೈತಿಕ ಸಂಬಂಧ ಹೊಂದಿದ್ದನು ಎನ್ನಲಾಗಿದೆ.
ಈ ಕಾರಣ ಆತನನ್ನು ಮುಂಬೈನಿಂದ ಕರೆಸಿ ಮಚ್ಚಿನಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಯರಂಡಗಿ ಗ್ರಾಮದ ದತ್ತು ಮತ್ತು ತುಕಾರಾಮ ಕೊಲೆ ಮಾಡಿದ್ದಾರೆ ಎಂದು ಮೃತನ ತಂದೆ ಕಾಂತಪ್ಪ ಮಂಠಾಳ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.