ಹುಲಸೂರ: ಮಕ್ಕಳು ತಮ್ಮ ಭವಿಷ್ಯವನ್ನು ಉಜ್ವಲ ಮಾಡಿಕೊಳ್ಳಬೇಕಾದರೆ ಕೌಶಲ ಆಧಾರಿತ ಶಿಕ್ಷಣ ಪಡೆಯುವುದು ಅತಿ ಅವಶ್ಯಕವಾಗಿದೆ ಎಂದು ಬಸವೇಶ್ವರ ಕೈಕಾರಿಕೆ ತರಬೇತಿ ಸಂಸ್ಥೆಯ ಪ್ರಾಚಾರ್ಯ ಜ್ಞಾನರೆಡ್ಡಿ ಬೋಳಿಂಗೆ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಎನ್.ಎಫ್.ಕ್ಯೂ.ಎಫ್ ಯೋಜನೆಯ ಅಡಿಯಲ್ಲಿ 2024-25ನೇ ಸಾಲಿನ ಮಾಹಿತಿ ತಂತ್ರಜ್ಞಾನ ಕೋರ್ಸ್ ಮಕ್ಕಳಿಗೆ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಪದವಿ ಪಡೆದರೆ ಉಪಯೋಗವಾಗುವುದಿಲ್ಲ. ಪದವಿಯ ಅರ್ಹತೆಗೆ ತಕ್ಕಂತೆ ಕೌಶಲ ವೃದ್ಧಿಯಾಗಬೇಕು. ಜಗತ್ತಿನಲ್ಲಿ ಐ.ಟಿ ಕ್ಷೇತ್ರವು ತೀವ್ರವಾಗಿ ಬೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಮಾಹಿತಿ ತಂತ್ರಜ್ಞಾನದ ಅವಶ್ಯಕತೆ ಬಹಳಷ್ಟಿದೆ’ ಎಂದರು.
‘ಮಾನವ ಇಂದು ಪ್ರತಿ ಹಂತದಲ್ಲಿಯೂ ಸಹ ಮಾಹಿತಿ ತಂತ್ರಜ್ಞಾನದ ಮೇಲೆ ಅವಲಂಬಿಸಿ ಜೀವನ ಮಾಡುತ್ತಿದ್ದಾನೆ. ಮಕ್ಕಳು ಎಸ್‌ಎಸ್‌ಎಲ್‌ಸಿ ನಂತರ ವೃತ್ತಿ ಶಿಕ್ಷಣ ಕೋರ್ಸಾದ ಕೈಗಾರಿಕೆ ತರಬೇತಿ ಆಯ್ಕೆ ಮಾಡಿಕೊಳ್ಳುವ ಮೂಲಕ ಉದ್ಯೋಗದ ಹೆಚ್ಚಿನ ಅವಕಾಶಗಳನ್ನು ಪಡೆಯಬಹುದು’ ಎಂದು ಹೇಳಿದರು.
ಆಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಸೂರ್ಯಕಾಂತ ಪಾಟೀಲ ಮಾತನಾಡಿ, ‘ನಮ್ಮ ಶಾಲೆಯಲ್ಲಿ 2024-25ನೇ ಸಾಲಿನಲ್ಲಿ ಎ.ಪಿ.ಬಿ ಅನುಮೋದಿತ ಎನ್.ಎಸ್.ಕ್ಯೂ.ಎಫ್ ಯೋಜನೆಯಡಿ ಮಕ್ಕಳಿಗೆ ಮಾಹಿತಿ ತಂತ್ರಜ್ಞಾನದ ತರಬೇತಿ ನೀಡಲಾಗುತ್ತಿದೆ’ ಎಂದರು.
ಶಿಕ್ಷಕರಾದ ದೇವಾನಂದ ನಂಜವಾಡೆ, ಎಂ.ಡಿ. ಆಜಮ್, ರುಹೂಲ ಅಮೀನ್, ಪರ್ವೇಜ ಮೋಮಿನ್, ಅಹಮದ ಅಲಿ ಅಹಮದ, ಸರೀತಾ ಮೇತ್ರೆ, ಹೀರಾಬಾಯಿ ಸದಾಶಿವ ಬಿರಾದಾರ ಭಾಗವಹಿಸಿದ್ದರು. ವಿದ್ಯಾರ್ಥಿನಿ ಸೃಷ್ಟಿ ನಿರೂಪಿಸಿದರು. ಕಾಶಿ ಧನರಾದ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.