ADVERTISEMENT

ಬೀದರ್‌: ಬೆಂಕಿಗೆ ಸುಟ್ಟು ಕರಕಲಾದ ಸೋಯಾ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 6:02 IST
Last Updated 18 ಅಕ್ಟೋಬರ್ 2025, 6:02 IST
ಸುಟ್ಟು ಕರಕಲಾದ ಸೋಯಾ ಅವರೆ ಬೆಳೆ ಎದುರು ರೈತ ಕಾಶಿನಾಥ ಹೈಬತಿ
ಸುಟ್ಟು ಕರಕಲಾದ ಸೋಯಾ ಅವರೆ ಬೆಳೆ ಎದುರು ರೈತ ಕಾಶಿನಾಥ ಹೈಬತಿ   

ಬೀದರ್‌: ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಸೋಯಾ ಅವರೆ ಬೆಳೆ ಸುಟ್ಟು ಕರಕಲಾಗಿರುವ ಘಟನೆ ತಾಲ್ಲೂಕಿನ ಅಮದಲ್‌ಪಾಡ್‌ ಗ್ರಾಮದಲ್ಲಿ ನಡೆದಿದೆ.

ಕಾಶಿನಾಥ ಹೈಬತಿ ಎಂಬ ರೈತನಿಗೆ ಸೇರಿದ ಜಮೀನಿನಲ್ಲಿ ಗುರುವಾರ ಈ ಘಟನೆ ನಡೆದಿದೆ. ಮಳೆಯಿಂದ ಉಳಿದಿದ್ದ ಬೆಳೆಯನ್ನು ಕಿಡಿಗೇಡಿಗಳು ಬೆಂಕಿ ಹಚ್ಚು ಹಾಳುಗೆಡವಿದ್ದಾರೆ ಎಂದು ಕಾಶಿನಾಥ ಆರೋಪಿಸಿದ್ದಾರೆ.

ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಸೋಯಾ ಮಳೆಯಿಂದ ಸ್ವಲ್ಪ ಹಾನಿಯಾಗಿತ್ತು. ಮಿಕ್ಕುಳಿದ ಮಾಲೂ ಹೊಲದಲ್ಲಿ ಕಟಾವು ಮಾಡಿ ಇರಿಸಿದ್ದೆ. ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿ ನಾಶಪಡಿಸಿದ್ದಾರೆ. ₹50 ಸಾವಿರ ಮೌಲ್ಯದ ಬೆಳೆ ಬೆಂಕಿಗೆ ಆಹುತಿಯಾಗಿದೆ. ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ನಷ್ಟಕ್ಕೆ ಸರ್ಕಾರ ಪರಿಹಾರ ಕೊಟ್ಟು ನೆರವಿಗೆ ಬರಬೇಕೆಂದು ಕಾಶಿನಾಥ ಮನವಿ ಮಾಡಿದ್ದಾರೆ.

ADVERTISEMENT