ADVERTISEMENT

ಚಾಮರಾಜನಗರ: ಕುತೂಹಲಕ್ಕೆ ಪ್ರವೇಶಿಸಿ ಚಿರತೆ ಬೋನಿಗೆ ಬಿದ್ದ!

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 23:29 IST
Last Updated 23 ಡಿಸೆಂಬರ್ 2025, 23:29 IST
ಚಾಮರಾಜನಗರ ತಾಲ್ಲೂಕಿನ ಗಂಗವಾಡಿಯಲ್ಲಿ ಚಿರತೆ ಸೆರೆ ಹಿಡಿಯಲು ಇರಿಸಿದ್ದ ಬೋನಿನೊಳಗೆ ಸಿಲುಕಿರುವ ವ್ಯಕ್ತಿ
ಚಾಮರಾಜನಗರ ತಾಲ್ಲೂಕಿನ ಗಂಗವಾಡಿಯಲ್ಲಿ ಚಿರತೆ ಸೆರೆ ಹಿಡಿಯಲು ಇರಿಸಿದ್ದ ಬೋನಿನೊಳಗೆ ಸಿಲುಕಿರುವ ವ್ಯಕ್ತಿ   

ಚಾಮರಾಜನಗರ: ತಾಲ್ಲೂಕಿನ ಗಂಗವಾಡಿ ಗ್ರಾಮದಲ್ಲಿ ಚಿರತೆ ಸೆರೆ ಹಿಡಿಯಲು ಇರಿಸಿದ್ದ ಬೋನಿಗೆ ವ್ಯಕ್ತಿಯೊಬ್ಬರು ಸಿಲುಕಿ ಮೂರು ತಾಸು ಪರಿದಾಡಿದ ಘಟನೆ ಮಂಗಳವಾರ ನಡೆದಿದೆ.

ಗಂಗವಾಡಿ,ಆಸುಪಾಸಿನ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಿದ್ದು, ಅರಣ್ಯ ಇಲಾಖೆಯು  ಸ್ವಯಂಚಾಲಿತ  ಲಾಕ್‌ಇದ್ದ ಬೋನು ಇರಿಸಿತ್ತು. ಕಿಟ್ಟಿ ಎಂಬವರು ಕುತೂಹಲಕ್ಕಾಗಿ ಪ್ರವೇಶಿಸಿದ್ದು, ಬೋನಿಗೆ ಸಿಕ್ಕಿಬಿದ್ದಿದ್ದಾರೆ.

ನಿರ್ಜನ ಪ್ರದೇಶವಾಗಿದ್ದರಿಂದ ಕೂಗಿಕೊಂಡರೂ ತಕ್ಷಣಕ್ಕೆ ಸಹಾಯ ಸಿಕ್ಕಿಲ್ಲ. ಬಾಗಿಲು ತೆರೆಯಲು ನಡೆಸಿದ ಪ್ರಯತ್ನಗಳು ವಿಫಲವಾಗಿ ಮೂರು ತಾಸು ಬಂಧಿಯಾಗಿದ್ದರು. ಅಕ್ಕಪಕ್ಕದ ಜಮೀನಿನ ರೈತರು ಬಂದು ಗಮನಿಸಿದ ಬಳಿಕ ಬೋನಿನಿಂದ ಅವರನ್ನು ಬಂಧಮುಕ್ತಗೊಳಿಸಲಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.