ಮಹಾಲಯ ಅಮಾವಾಸ್ಯೆ ಜಾತ್ರಾ ಮಹೋತ್ಸವದಿಂದ ಆರಂಭ | ರಾಜ್ಯದಲ್ಲಿಯೇ ಮೊಟ್ಟ ಮೊದಲು ಮಧುಮೇಹಿ ಭಕ್ತರಿಗಾಗಿ ಪ್ರತ್ಯೇಕ ಕೌಂಟರ್
ಹನೂರು (ಚಾಮರಾಜನಗರ ಜಿಲ್ಲೆ): ‘ಮಧುಮೇಹಿ ಭಕ್ತರಿಗೆ ಸಿರಿಧಾನ್ಯಗಳ ಪ್ರಸಾದ ವಿತರಿಸುತ್ತಿದ್ದು, ಇದು ರಾಜ್ಯದಲ್ಲಿಯೇ ಮೊದಲ ಪ್ರಯತ್ನ’ ಎಂದು ಮಲೆಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು ತಿಳಿಸಿದರು.
‘ಮಹಾಲಯ ಅಮಾವಾಸ್ಯೆಯ ಜಾತ್ರಾನಿಮಿತ್ತ ಪ್ರಾಧಿಕಾರ ವಿಶೇಷವಾಗಿ ಮಧುಮೇಹಿಗಳಿಗೆ ನವಣೆ, ಸಾಮೆಗಳಿಂದ ಅವಲಕ್ಕಿ ಪಾಯಸ, ಬಿಸಿಬೇಳೆ ಬಾತ್ ಪ್ರಸಾದವನ್ನು ಹೊಸದಾಗಿ ಪರಿಚಯಿಸಿದೆ. ಅದಕ್ಕಾಗಿ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ಇದು ನಿರಂತರವಾಗಿ ನಡೆಯಲಿದೆ. ಭಕ್ತರ ಆರೋಗ್ಯ ಸುರಕ್ಷತೆ ಪ್ರಾಧಿಕಾರದ ಜವಾಬ್ದಾರಿ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.