ADVERTISEMENT

ಬಿಆರ್‌ಟಿ: ಮುಂಜಾನೆ ಶಾಲೆಗೆ ಬಂದ ಗಂಡಾನೆ!

​ಪ್ರಜಾವಾಣಿ ವಾರ್ತೆ
Published 27 ಜುಲೈ 2022, 4:08 IST
Last Updated 27 ಜುಲೈ 2022, 4:08 IST
   

ಯಳಂದೂರು (ಚಾಮರಾಜನಗರ):ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣಕ್ಕೆ ಬುಧವಾರ ಮುಂಜಾನೆ ಸಲಗವೊಂದು ಪ್ರವೇಶಿಸಿದೆ.

ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು, ಆನೆ ಒಳಗೆ ಪ್ರವೇಶಿಸಿರುವುದನ್ನು ಕಂಡು ಅರಣ್ಯ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಿದರು.

ಶಾಲೆಯ ಹಿಂಭಾಗದ ಸೋಲಾರ್ ತಂತಿಯನ್ನು ಕಿತ್ತು ಒಳಗೆ ಪ್ರವೇಶಿ ಸಿರುವ ಆನೆ ಶಾಲೆಯ ಆವರಣದಲ್ಲಿ ಸುತ್ತಾಡಿದೆ.

ಅರಣ್ಯಾಧಿಕಾರಿ ವರುಣ್ ನೇತೃತ್ವದಲ್ಲಿ ಸಿಬ್ಬಂದಿಗಳು ಸ್ಥಳಕ್ಕೆ ಶೀಘ್ರವೇ ಭೇಟಿ ನೀಡಿ ಆನೆಯನ್ನು ವಸತಿ ಶಾಲೆಯ ಹೊರಭಾಗಕ್ಕೆ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು.

ADVERTISEMENT

ಪ್ರತಿದಿನ ಗೇಟ್ ಬಳಿ ಆನೆ ಪ್ರತ್ಯಕ್ಷ :

ಪ್ರತಿದಿನ ಆನೆ ವಸತಿ ಶಾಲೆಯ ಆವರಣದ ಗೇಟ್ ಬಳಿ ತಿರುಗಾಡುವುದು ಕಂಡುಬರುತ್ತಿತ್ತು. ಕೆಲವು ದಿನಗಳ ಹಿಂದೆ ಗೇಟ್ ಮುರಿದಿತ್ತು. ಆದರೆ ಬುಧವಾರ ನಸುಕಿನಲ್ಲಿ ಶಾಲಾ ಆವರಣದಲ್ಲಿ ಕಂಡುಬಂದಿರುವುದು ವಿದ್ಯಾರ್ಥಿಗಳ ಪೋಷಕರಿಗೆ ಆತಂಕವನ್ನು ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.