
ಗುಂಡ್ಲುಪೇಟೆ: ತಾಲ್ಲೂಕಿನ ಚಿಕ್ಕಾಟಿ ಗ್ರಾಮದಲ್ಲಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಯುವಕ ಮಹದೇವಪ್ರಸಾದ್‌ಗೆ ಬೆಂಗಳೂರಿನ ಸಚ್ಚಿದಾನಂದ ಟ್ರಸ್ಟ್ ಅಧ್ಯಕ್ಷ ಬಸವರಾಜು ₹50 ಸಾವಿರ ಆರ್ಥಿಕ ನೆರವು ನೀಡಿದರು.
ಮಹದೇವಪ್ರಸಾದ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮಾಹಿತಿ ಅರಿತ ಸಚ್ಚಿದಾನಂದ ಟ್ರಸ್ಟ್ ಪದಾಧಿಕಾರಿಗಳು ನಿವಾಸಕ್ಕೆ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿದರು. ‘ಕಿಡ್ನಿ ಕಸಿ ಚಿಕಿತ್ಸೆ ನೆರವು ಬಯಸಿದ್ದ ವಿಷಯ ತಿಳಿದು ಭೇಟಿ ನೀಡಿ ಕೈಲಾದ ಧನಸಹಾಯ ಮಾಡಿದ್ದೇನೆ. ಚಿಕಿತ್ಸೆ ಪಡೆದು ಎಲ್ಲರಂತೆ ಜೀವನ ನಡೆಸುವಂತಾಗಲಿ’ ಎಂದು ಟ್ರಸ್ಟ್ ಅಧ್ಯಕ್ಷ ಬಸವರಾಜು ಹಾರೈಸಿದರು. ಮಹದೇವಪ್ರಸಾದ್ ತಂದೆ, ತಾಯಿ ಬಸವರಾಜು ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಚಿಕ್ಕಾಟಿ ಶಿವಣ್ಣನಾಯಕ, ಪ್ರವೀಣ್ ಆಲತ್ತೂರು, ಬಸವರಾಜು, ಸಿದ್ದಪ್ಪ, ಸಚ್ಚಿದಾನಂದ ಟ್ರಸ್ಟ್‌ನ ಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.