ಬಾಗೇಪಲ್ಲಿ ನಿವಾಸಿ ಬಿ.ಆರ್.ಮೊಹಮದ್ ರಫಿ ಹಾಗೂ ಸಲ್ಮಾ ಸುಲ್ತಾನ ದಂಪತಿಯ ಒಂದೂವರೆ ವರ್ಷದ ಮಗಳಾದ ಐನಾ ಜೋಹಾ 2025ನೇ ಸಾಲಿನ ದಾಖಲೆಗಳ ಪುಸ್ತಕ ಸೇರಿದ್ದಾರೆ
ಬಾಗೇಪಲ್ಲಿ: ಪಟ್ಟಣದ ಕುಂಬಾರಪೇಟೆಯ 18ನೇ ವಾರ್ಡ್ ನಿವಾಸಿ ಬಿ.ಆರ್. ಮೊಹಮದ್ ರಫಿ ಹಾಗೂ ಸಲ್ಮಾ ಸುಲ್ತಾನ ಅವರ ಪುತ್ರಿ ಒಂದೂವರೆ ವರ್ಷದ ಐನಾ ಜೋಹಾ ಎಲ್ಲ ಪ್ರಾಣಿಗಳು, ಪಕ್ಷಿಗಳು, ಹಣ್ಣುಗಳು, ದೇಶಗಳ ಧ್ವಜಗಳು ಮತ್ತು ಮನೆ ಬಳಕೆ ವಸ್ತುಗಳನ್ನು ಪಠಪಠನೇ ಹೇಳುತ್ತಾರೆ. ಈ ಮೂಲಕ ಅವರು ಭಾರತದ ದಾಖಲೆಗಳ ಪುಸ್ತಕ ಸೇರಿದ್ದಾರೆ.
ಐನಾ ಜೋಹಾ 30 ಹಣ್ಣುಗಳು, 30 ತರಕಾರಿಗಳು, ಪ್ರಾಣಿಗಳು, ಪಕ್ಷಿಗಳು, ಸಾರಿಗೆ ವಾಹನಗಳು, 25 ದೇಶಗಳ ಧ್ವಜಗಳು, 100ಕ್ಕೂ ಹೆಚ್ಚು ಗೃಹ ಬಳಕೆ ವಸ್ತುಗಳ ಹೆಸರುಗಳು, ಅಕ್ಷರಗಳು, ಸಂಖ್ಯೆಗಳು, ಬಣ್ಣಗಳು, ದೇಹದ ಭಾಗಗಳನ್ನು ಪಠಪಠನೇ ಹೇಳುತ್ತಾರೆ. ಬಾಲಕಿಯ ಸಾಧನೆ ಗುರುತಿಸಿ, ದೇಶದ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೆಸರು ದಾಖಲಾಗಿದೆ. ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಈ ಸಾಧನೆಯು ಪೋಷಕರು ಮತ್ತು ನೆರೆಹೊರೆಯವರಲ್ಲಿ ಸಂತಸ ತಂದಿದೆ.
‘ವಿವಿಧ ವಸ್ತುಗಳ ಚಿತ್ರಗಳನ್ನು ಒಮ್ಮೆ ಐನಾ ಜೋಹಾ ಅವರಿಗೆ ತೋರಿಸಿ ಹೇಳಿಕೊಟ್ಟಿದ್ದೇವೆ. ಇದೀಗ ಯಾವುದೇ ಚಿತ್ರ ತೋರಿಸಿ, ಅದು ಯಾವುದು ಎಂದು ಕೇಳಿದರೆ, ತಟ್ಟಂತ ಉತ್ತರಿಸುತ್ತಾಳೆ. ಮಗಳ ಸಾಧನೆಯು ಕುಟುಂಬದ ಗೌರವ ಹೆಚ್ಚಿಸಿದೆ’ ಎಂದು ಬಾಲಕಿ ತಾಯಿ ಸಲ್ಮಾ ಸುಲ್ತಾನ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.