
ಪ್ರಜಾವಾಣಿ ವಾರ್ತೆ
‘ಅಬ್ದುಲ್ಲ’ ಹೆಸರಿನಲ್ಲಿ ಚಿಕ್ಕಬಳ್ಳಾಪುರದ ಜಿಲ್ಲಾ ಕ್ರೀಡಾಂಗಣದಲ್ಲಿ ವಾಮಾಚಾರ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರದ ಸರ್. ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಿಂಬೆ ಹಣ್ಣು, ಕೆಂಪು ಬಣ್ಣದ ಅಕ್ಕಿ ಇರಿಸಿ ವಾಮಾಚಾರ ಮಾಡಲಾಗಿದೆ.
ಕ್ರೀಡಾಂಗಣದಲ್ಲಿರುವ ಯುವ ಜನ ಮತ್ತು ಕ್ರೀಡಾ ಇಲಾಖೆ ಕಟ್ಟಡದ ಮುಖ್ಯ ದ್ವಾರದಲ್ಲಿ ಅಕ್ಕಿಯಲ್ಲಿ ಚಿಕ್ಕಬಳ್ಳಾಪುರದ ಕ್ರೀಡಾ ಇಲಾಖೆ ದ್ವಿತೀಯ ದರ್ಜೆ ಸಹಾಯಕ ಅಬ್ದುಲ್ಲ ಅವರ ಹೆಸರು ಬರೆಯಲಾಗಿದೆ.
ಕ್ರೀಡಾಂಗಣ ಮುಖ್ಯ ಗೇಟ್‌ನಿಂದ ವಾಯು ವಿಹಾರ ನಡೆಸುವ ಮಾರ್ಗದುದ್ದಕ್ಕೂ ನಿಂಬೆ ಹಣ್ಣು, ಕೆಂಪು ಬಣ್ಣ ಮಿಶ್ರಿತ ಅಕ್ಕಿ ಚೆಲ್ಲಲಾಗಿದೆ.
ವಾಯುವಿಹಾರಕ್ಕೆ ಬಂದವರು ಈ ವಾಮಾಚಾರದ ಹೆಸರಿನಲ್ಲಿ ನಡೆದಿರುವ ಆಟಗಳನ್ನು ಅಚ್ಚರಿಯಿಂದ ನೋಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.