ADVERTISEMENT

ಸಂವಿಧಾನದ ಮೂಲ ಪ್ರತಿಯ ಮುಖಪುಟದಲ್ಲಿ ರಾಮ,ಲಕ್ಷ್ಮಣ, ಸೀತೆ ಇದ್ದಾರೆ: ಶಾಸಕ ಯತ್ನಾಳ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 10:45 IST
Last Updated 5 ಅಕ್ಟೋಬರ್ 2025, 10:45 IST
   

ಚಿಕ್ಕಬಳ್ಳಾಪುರ: ಗೋ ಸಂಪತ್ತು ರಕ್ಷಿಸಬೇಕು ಎಂದು ಸಂವಿಧಾನದಲ್ಲಿ ಸೇರಿಸಿದವರು ಅಂಬೇಡ್ಕರ್. ಅಂಬೇಡ್ಕರ್ ಅವರು ಬರೆದ ಸಂವಿಧಾನದ ಮೂಲ ಪ್ರತಿಯ ಮುಖಪುಟದಲ್ಲಿ ರಾಮ, ಲಕ್ಷ್ಮಣ, ಸೀತೆ ಹನುಮ ಇದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು. 

ತಾಲ್ಲೂಕಿನ ಕವರನಹಳ್ಳಿಯಲ್ಲಿ ನಡೆದ ಗೋದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಗೋರಕ್ಷಣೆ ಮಾಡಬೇಕು ಎನ್ನುವುದನ್ನು ನಮ್ಮ ಸನಾತನ ಧರ್ಮ ಹೇಳುತ್ತದೆ. ಆದರೆ ನಮ್ಮ ದೇಶದಲ್ಲಿ ಗೋ ಹಂತಕರ ಸರ್ಕಾರಗಳು, ಸ್ವಾಮೀಜಿಗಳನ್ನು ಅಪಮಾನಿಸುವ ಸರ್ಕಾರಗಳು ಬರುತ್ತಿವೆ ಎಂದರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.