
ಪ್ರಜಾವಾಣಿ ವಾರ್ತೆ
ಗೌರಿಬಿದನೂರು: ತಾಲ್ಲೂಕಿನ ಹಾಲಗಾನಹಳ್ಳಿ ಮತ್ತು ದೊಡ್ಡ ಕುರುಗೋಡು ಗ್ರಾಮದ ಬಳಿ ಆಂಧ್ರಪ್ರದೇಶದಿಂದ ಅಕ್ರಮವಾಗಿ ಸೇಂದಿ ಸಾಗಿತುತ್ದಿದ್ ಆರೋಪದ ಮೇರೆಗೆ ಇಬ್ಬರು ಆರೋಪಿಗಳನ್ನು ಅಬಕಾರಿ ಪೊಲೀಸರು ಬಂಧಿದ್ದಾರೆ.
ಯಲಹಂಕದ ಮುನಿಯಪ್ಪ (57),
ಅರಸಲಬಂಡೆ ಗ್ರಾಮದ ವೆಂಕಟೇಶ್ ಬಂಧಿತರು. ಬಂಧಿತರಿಂದ 22 ಲೀಟರ್ ಸೇಂದಿ ಮತ್ತು ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಬಕಾರಿ ನಿರೀಕ್ಷಿಕ ಮಂಜುನಾಥ್ ಮಾಹಿತಿ ನೀಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ನಿರೀಕ್ಷಕ ಜೈರಾಮ್ ಎಸ್. ರಾಠೋಡ್, ಕುಮಾರ್ ಸಿ.ಎನ್ ಹಾಗೂ ಅಬಕಾರಿ ಕಾನ್‌ಸ್ಟೆಬಲ್ ಅಜಿತ್ ಕೆ. ಬೆಂಡವಾಡೆ ಮತ್ತು ರವಿಪ್ರಸಾದ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.