
ಪ್ರಜಾವಾಣಿ ವಾರ್ತೆಕಲ್ಲೂಡಿ… ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನಲ್ಲಿ ಇರುವ ಈ ಹಳ್ಳಿಯ ಹಪ್ಪಳ ಇಡೀ ರಾಜ್ಯದಲ್ಲಿಯೇ ಫೇಮಸ್. 800 ರಿಂದ 900 ಮನೆಗಳ ಕಲ್ಲೂಡಿಯಲ್ಲಿ 700ಕ್ಕೂ ಹೆಚ್ಚು ಮನೆಗಳಲ್ಲಿ ಹಪ್ಪಳ ತಯಾರಿಸಲಾಗುತ್ತದೆ. ಬಡ ಮತ್ತು ಮಧ್ಯಮ ವರ್ಗದ ಜನ ತಮ್ಮ ಮನೆಯ ನಿರ್ಮಾಣದಿಂದ ಮಕ್ಕಳ ವಿದ್ಯಾಭ್ಯಾಸದವರೆಗೂ ಎಲ್ಲದರ ಶ್ರೇಯವನ್ನೂ ಹಪ್ಪಳಕ್ಕೆ ನೀಡುತ್ತಾರೆ. ಗಂಗಲಕ್ಷ್ಮಮ್ಮ ಅವರ ತರಬೇತಿ ಮತ್ತು ಮಹಿಳಾ ಸ್ವಾವಲಂಬನೆಯ ಹಾದಿ, ವೃದ್ಧರ ದುಡಿಮೆ, ಬೆಂಗಳೂರಿನ ಮಾರುಕಟ್ಟೆಯ ಬೇಡಿಕೆ… ಹೀಗೆ ಕಲ್ಲೂಡಿಯ ಹಪ್ಪಳ ಕಥೆ ಎಲ್ಲೆಡೆ ಸಪ್ಪಳ ಮಾಡುತ್ತಿದೆ !
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.