
ಗೌರಿಬಿದನೂರು: ತಾಲ್ಲೂಕಿನ ಡಿ.ಪಾಳ್ಯ ಹೋಬಳಿಯ ನಾಮಗೊಂಡ್ಲು ಗ್ರಾಮದಲ್ಲಿ ಜೈ ಕರ್ನಾಟಕ ಗೆಳೆಯರ ಬಳಗದ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯಿಂದ ಶನಿವಾರ 11ನೇ ವರ್ಷದ ಕನ್ನಡ ರಾಜ್ಯೋತ್ಸವ ನಡೆಯಿತು.
ಶಾಸಕ ಕೆ.ಎಚ್ ಪುಟ್ಟಸ್ವಾಮಿ ಗೌಡ ಮಾತನಾಡಿ, ನಾಡು ಮತ್ತು ನುಡಿಯ ಬಗ್ಗೆ ತಾಲ್ಲೂಕಿನ ಜನತೆ ಹೊಂದಿರುವ ಅಭಿಮಾನವು ಅಪಾರವಾದದ್ದು. ಗಡಿಭಾಗದ ತಾಲ್ಲೂಕಾದರು ಇಲ್ಲಿರುವ ಜನರು ಕನ್ನಡನಾಡು, ನುಡಿ ಸಂಸ್ಕೃತಿಯನ್ನು ಗೌರವಿಸುವ ಮನಸ್ಸನ್ನು ಹೊಂದಿರುವುದು ಸಂತೋಷದ ಸಂಗತಿ. ನಾವೆಲ್ಲರೂ ಒಂದಾಗಿ ಕನ್ನಡ ಭಾಷೆ, ಕನ್ನಡ ನಾಡನ್ನು ಸಮೃದ್ಧವಾಗಿ ಬೆಳಸುವ ಕೆಲಸ ಮಾಡಬೇಕೆಂದು ತಿಳಿಸಿದರು.
ಆರ್.ಆರ್.ರೆಡ್ಡಿ, ವಕೀಲ ರಂಗರಾಜು, ಪ್ರಕಾಶ್ ರೆಡ್ಡಿ, ಜಿ.ನಾಗೇಂದ್ರ, ವೆಳಪಿ ಆನಂದ, ರಾಮಚಂದ್ರರೆಡ್ಡಿ, ಮಹೇಂದ್ರ, ಶಿವಶಂಕರರೆಡ್ಡಿ, ಕರವೇ ನರೇಂದ್ರ, ಶಿವಾರೆಡ್ಡಿ, ಶ್ರೀಧರ್, ಪುರುಷೋತ್ತಮ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.