ಮಂಚೇನಹಳ್ಳಿ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಯನ್ಸ್ ಸಂಸ್ಥೆ ಹಾಗೂ ಲಯನ್ಸ್ ಟ್ರಸ್ಟ್ ವತಿಯಿಂದ ಕಣ್ಣು ಉಚಿತ ತಪಾಸಣೆ ಶಿಬಿರವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಶಿಬಿರದಲ್ಲಿ 200ಕ್ಕೂ ಹೆಚ್ಚು ಜನರಿಗೆ ಉಚಿತ ನೇತ್ರ ಪರೀಕ್ಷೆ, ಐಒಎಲ್ ಅಳವಡಿಕೆ ಮಾಡಲಾಯಿತು. 50 ಜನರು ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದರು. ರಕ್ತದೊತ್ತಡ ಹಾಗೂ ಸಕ್ಕರೆಯ ಕಾಯಿಲೆ ತಪಾಸಣೆ ನಡೆಸಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಎನ್. ನಂಜೇಗೌಡ, ಇತ್ತೀಚೆಗೆ ವಯೋಸಹಜ ಅಲ್ಲದೆ ಮಧುಮೇಹದಿಂದಲೂ ಸಹ ಕಣ್ಣಿನ ತೊಂದರೆ ಹೆಚ್ಚಾಗಿ ಕಂಡುಬರುತ್ತಿದೆ. ಹೀಗಾಗಿ ಗ್ರಾಮೀಣ ಭಾಗದ ಜನ ಇಂತಹ ಶಿಬಿರದಲ್ಲಿ ತಪಾಸಣೆಗೆ ಒಳಗಾಗಬೇಕು ಎಂದು ಹೇಳಿದರು.
ಪ್ರೊ ರಾಮಾಂಜಿನೇಯಲು, ಎಂ.ಜಿ. ಶ್ರೀನಿವಾಸ್, ಅಂಬಿಕಾ, ಜಬಿವುಲ್ಲಾ ಖಾನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.