ADVERTISEMENT

ಕೈವಾರ| ಆತ್ಮವಿಶ್ವಾಸ, ‌ನಂಬಿಕೆ ಯುವ ಜನರ ಮೂಲ ಮಂತ್ರ: ಶಿಕ್ಷಕ ಉಮೇಶ್‌

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 4:37 IST
Last Updated 13 ಜನವರಿ 2026, 4:37 IST
ಚಿಂತಾಮಣಿ ತಾಲ್ಲೂಕಿನ ಕೈವಾರದ ಅಂಬೇಡ್ಕರ್‌ ಶಾಲೆಯಲ್ಲಿ ವಿವೇಕಾನಂದ ಜಯಂತಿ ನಡೆಯಿತು
ಚಿಂತಾಮಣಿ ತಾಲ್ಲೂಕಿನ ಕೈವಾರದ ಅಂಬೇಡ್ಕರ್‌ ಶಾಲೆಯಲ್ಲಿ ವಿವೇಕಾನಂದ ಜಯಂತಿ ನಡೆಯಿತು   

ಕೈವಾರ: ಧೈರ್ಯ, ಆತ್ಮವಿಶ್ವಾಸ, ಸರ್ವಧರ್ಮ ಸಮ್ಮತಿ ಮತ್ತು ಯುವಶಕ್ತಿಯನ್ನು ಜಾಗೃತಿಗೊಳಿಸುವುದು ಸ್ವಾಮಿ ವಿವೇಕಾನಂದರ ಆಶಯವಾಗಿತ್ತು ಎಂದು ಶಿಕ್ಷಕ ಉಮೇಶ್‌ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕೈವಾರದ ಅಂಬೇಡ್ಕರ್ ಅನುದಾನಿತ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 163ನೇ ಜಯಂತಿಯಲ್ಲಿ ಮಾತನಾಡಿದರು.

ಮುಖ್ಯ ಶಿಕ್ಷಕ ಸುರೇಶ ಮಾತನಾಡಿ, ಸ್ವಾಮಿ ವಿವೇಕಾನಂದರು ಭಾರತದ ಯುವಕರಿಗೆ ಸ್ಫೂರ್ತಿ. ಅವರ ಜಯಂತಿಯನ್ನು ರಾಷ್ಟ್ರೀಯ ಯುವ ದಿನ ಎಂದು 1984ರಲ್ಲಿ ಭಾರತ ಸರ್ಕಾರ ಘೋಷಣೆ ಮಾಡಿತು. ಅವರು ಅರ್ಧ ಆಯುಷ್ಯನಲ್ಲಿ ಇಡೀ ಭಾರತ ದೇಶವನ್ನು ಕಾಲ್ನಡಿಗೆಯಲ್ಲಿ ಸುತ್ತಿ ಬಡತನ ನಿರ್ಮೂಲನೆ ಮತ್ತು ಎಲ್ಲರಿಗೂ ಶಿಕ್ಷಣ ಸಿಗುವಂತೆ ಜಾಗೃತಿ ಮೂಡಿಸಿದ ಮಹಾನ್‌ ಸಂತ ಎಂದರು.

ADVERTISEMENT

ಅಮೇರಿಕದ ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನ ಉದ್ದೇಶಿಸಿ ಮಾಡಿದ ವಿವೇಕಾನಂದರ ಭಾಷಣ ಭಾರತ ದೇಶದ ಹಿಂದೂ ಪರಂಪರೆಯನ್ನು ಇಡೀ ವಿಶ್ವಕ್ಕೆ ಪರಿಚಯಿಸಿದರು ಎಂದು ಹೇಳಿದರು.

ಶಾಲೆ ಸಂಸ್ಥಾಪಕಿ ಎಸ್.ಎಂ.ರೋಜಾ, ಮುಖ್ಯ ಶಿಕ್ಷಕ ಲೋಕೇಶ್, ಶಿಕ್ಷಕರಾದ ಶ್ರೀಧರ್ ಹಿರೇಮಠ, ಭಾಗ್ಯಮ್ಮ, ಮಂಜುಳಾ, ನೇತ್ರ, ಸುಮಾ, ದಿವ್ಯ, ಜ್ಞಾನೇಶ್ವರಿ, ಧನುಷ್ ಕುಮಾರ್, ವಿವೇಕ್, ಯೋಗಮ್ಮ ಮಲ್ಲಾಪುರ್, ರವಿಕೀರ್ತಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.