ಆಲ್ದೂರು: ಖೇಲೊ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಗುಜರಾತ್‌ನಲ್ಲಿ ನಡೆಯಲಿರುವ ಪ್ರಥಮ ಆವೃತ್ತಿಯ ಬೀಚ್ ಕಬಡ್ಡಿ ಚಾಂಪಿಯನ್‌ಷಿಪ್‌ಗೆ ಆಲ್ದೂರು ಸಮೀಪದ ಹಾಂದಿ ಸತ್ತಿಹಳ್ಳಿಯ ಮಾನಸಾ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ಮಹಿಳಾ ತಂಡದ ಸದಸ್ಯರಲ್ಲಿ ಮಾನಸಾ ಒಬ್ಬರು. ಮೂಡಿಗೆರೆಯ ಮೇಧಾ ಸ್ಪೋರ್ಟ್ಸ್ ಕ್ಲಬ್‌ನ ಕ್ರೀಡಾಪಟುವಾಗಿರುವ ಮಾನಸಾ, ಸತ್ತಿಹಳ್ಳಿಯ ಸೀನಾ– ಗಿರಿಜಾ ದಂಪತಿ ಪುತ್ರಿ ಎಂದು ತರಬೇತುದಾರರಾದ ಸುರೇಂದ್ರ ಕೌಶಿಕ್, ಪೂರ್ಣೇಶ್ ಹರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.