ADVERTISEMENT

ಫೋಟೊ ಫೀಚರ್ | ದೇವೀರಮ್ಮ ಬೆಟ್ಟದಲ್ಲಿ ವಿಶೇಷ ಪೂಜಾ ಕೈಂಕರ್ಯ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2019, 7:57 IST
Last Updated 27 ಅಕ್ಟೋಬರ್ 2019, 7:57 IST
ಚಿಕ್ಕಮಗಳೂರು ತಾಲ್ಲೂಕಿನ ದೇವಿರಮ್ಮ ಬೆಟ್ಟ
ಚಿಕ್ಕಮಗಳೂರು ತಾಲ್ಲೂಕಿನ ದೇವಿರಮ್ಮ ಬೆಟ್ಟ   

ಚಿಕ್ಕಮಗಳೂರು:ತಾಲ್ಲೂಕಿನ ಬಿಂಡಿಗ ಮಲ್ಲೇನಹಳ್ಳಿಯ ಆದಿಶಕ್ತಿ ದೇವೀರಮ್ಮ ದರ್ಶನಕ್ಕೆ ರಾಜ್ಯವ ವಿವಿಧೆಡೆಗಳಿಂದ ಭಕ್ತರು ಆಪಾರ ಸಂಖ್ಯೆಯಲ್ಲಿ ಆಗಮಿಸಿದ್ದಾರೆ.ಇಂದು ಮುಂಜಾನೆ (ಅ.27) ಸಡಗರ ಸಂಭ್ರಮದೊಂದಿಗೆ ದೇವಿಯ ಪೂಜಾ ಕೈಂಕರ್ಯಗಳುಆರಂಭವಾಯಿತು.ನರಕ ಚತುರ್ದಶಿಯಂದು ಆರಂಭವಾಗುವ ದೀಪೋತ್ಸವ ಮೂರು ದಿನಗಳವರೆಗೆ(ಅ.30ರವರೆಗೆ) ನಡೆಯಲಿದೆ.

ದೇವೀರಮ್ಮ ದೇಗುಲ ಅಭಿವೃದ್ಧಿ ಸಮಿತಿಯು ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಚಂದ್ರದ್ರೋಣ ಪರ್ವತ ಶ್ರೇಣಿಯ ದೇವೀರಮ್ಮ ಬೆಟ್ಟದ ಮಂಟಪದಲ್ಲಿನಸುಕಿನಲ್ಲಿ ಅಭಿಷೇಕ ನೆರವೇರಿತು. ಮಧ್ಯಾಹ್ನದವರೆಗೆ ವಿವಿಧ ಪೂಜಾಕೈಂಕರ್ಯಗಳು ನಡೆದವು. ರಾತ್ರಿ 7 ಗಂಟೆಗೆ ದೀಪೋತ್ಸವ ಜರುಗಲಿದೆ.

ನಿನ್ನೆ ನಡುರಾತ್ರಿಯಿಂದಲೇ ಭಕ್ತರು ಬೆಟ್ಟ ಏರಲು ಆರಂಭಿಸಿದ್ದರು.ಬೆಟ್ಟದಲ್ಲಿ ವರ್ಷದಲ್ಲಿ ಒಮ್ಮೆ ದೀಪಾವಳಿಯಂದು ದೇವಿಗೆ ಪೂಜೆ ನೆರವೇರುವುದು ವಿಶೇಷ. ಭಕ್ತರು ಮಲ್ಲೇನಹಳ್ಳಿಗೆ ತಲುಪಲು ಅನುಕೂಲವಾಗುವಂತೆ ಚಿಕ್ಕಮಗಳೂರು, ತರೀಕೆರೆ, ಬೀರೂರು, ಕಡೂರು ಇತರೆಡೆಗಳಿಂದ ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿದೆ.

ADVERTISEMENT

ಬೆಟ್ಟದ ತಪ್ಪಲಿನಲ್ಲಿ (ಬಿಂಡಿಗ ಮಲ್ಲೇನಹಳ್ಳಿ) ದೇಗುಲದಲ್ಲಿ ಇದೇ 30ರವರೆಗೆ ಕೈಂಕರ್ಯಗಳು ನಡೆಯಲಿವೆ.

ಬೆಟ್ಟ ಏರುತ್ತಿರುವ ಭಕ್ತರು
ಬೆಟ್ಟದಲ್ಲಿ ಭಕ್ತರ ದಂಡು
ದೇವಿರಮ್ಮನ ದರ್ಶನಕ್ಕೆ ನೂಕುನುಗ್ಗಲು
ಬೆಟ್ಟದಲ್ಲಿ ದೇವಿರಮ್ಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.