ADVERTISEMENT

ದುಬೈನಲ್ಲಿ ಕೋವಿಡ್‌ಗೆ ಬಲಿಯಾದ ಕಳಸದ ಗರ್ಭಿಣಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 11:12 IST
Last Updated 5 ಮಾರ್ಚ್ 2021, 11:12 IST
ಶ್ರೇಯಾ ರೈ
ಶ್ರೇಯಾ ರೈ   

ಕಳಸ: ಇಲ್ಲಿನ ಮಹಾವೀರ ರಸ್ತೆಯ ಟೈಲರ್ವಿಠಲ ಶೆಟ್ಟಿ ಅವರ ಪುತ್ರಿ ಶ್ರೇಯಾ ರೈ (24) ದುಬೈಯಲ್ಲಿ ಕೋವಿಡ್‌–19ನಿಂದ ಮೃತಪಟ್ಟಿದ್ದಾರೆ.

ಶ್ರೇಯಾ ಅವರು ಉಜಿರೆ ಎಸ್‍ಡಿಎಂ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಕಳೆದ ವರ್ಷ ಪಡುಬಿದ್ರಿಯ ಯುವಕನನ್ನು ವಿವಾಹವಾಗಿದ್ದ ಅವರು, 7 ತಿಂಗಳ ಗರ್ಭಿಣಿ ಆಗಿದ್ದರು.

ಕೆಲ ದಿನಗಳ ಹಿಂದೆ ಕೋವಿಡ್‌ ಸೋಂಕಿಗೆ ತುತ್ತಾಗಿದ್ದ ಅವರು, ನಂತರ ನ್ಯೂಮೋನಿಯಾದಿಂದ ಬಳಲುತ್ತಿದ್ದರು. ಶುಕ್ರವಾರ ಬೆಳಿಗ್ಗೆ ದುಬೈನ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.