ADVERTISEMENT

ರಾಜೀವ್ ಗಾಂಧಿಯಿಂದ ಶಾಶ್ವತ ಯೋಜನೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 7:29 IST
Last Updated 22 ಆಗಸ್ಟ್ 2025, 7:29 IST
<div class="paragraphs"><p>ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರಾಜೀವ್ ಗಾಂಧಿ ಮತ್ತು ಡಿ.ದೇವರಾಜ ಅರಸು ಜನ್ಮದಿನ ಆಚರಿಸಲಾಯಿತು</p></div>

ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರಾಜೀವ್ ಗಾಂಧಿ ಮತ್ತು ಡಿ.ದೇವರಾಜ ಅರಸು ಜನ್ಮದಿನ ಆಚರಿಸಲಾಯಿತು

   

ಚಿಕ್ಕಮಗಳೂರು: ದೇಶ ಯುವಜನ ಮತ್ತು ಭವಿಷ್ಯದ ಕಲ್ಪನೆಯೊಂದಿಗೆ ರಾಜೀವ್ ಗಾಂಧಿ ಜಾರಿಗೆ ತಂದಿದ್ದ ಯೋಜನೆಗಳು ಶಾಶ್ವತವಾಗಿ ನೆಲೆಯೂರಿವೆ ಎಂದು ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಯಲ್ಲಿ ನಡೆದ ರಾಜೀವ್ ಗಾಂಧಿ ಹಾಗೂ ಡಿ.ದೇವರಾಜ ಅರಸು ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಜನಪರ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೊಳಿದ್ದರು. ಹಾಗೆಯೇ ಡಿ.ದೇವರಾಜ ಅರಸು ಅವರು ಹಿಂದುಳಿದ ವರ್ಗದವರಿಗೆ ಹಾಗೂ ದೀನ ದಲಿತರಿಗೆ ನ್ಯಾಯ ಕೊಡಿಸಲು ಪ್ರಯತ್ನ ಮಾಡಿದ್ದರು ಎಂದು ಹೇಳಿದರು.

ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಮಾತನಾಡಿ, ‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರಿಗೆ ಸವಲತ್ತು ಸಕಾಲದಲ್ಲಿ ಸಿಗಲು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಲು ರಾಜೀವ್ ಗಾಂಧಿ ಅವರು ನೀಡಿದ ಕೊಡುಗೆ ಅಪಾರ. ಡಿ.ದೇವರಾಜ ಅರಸು ಅವರು ಉಳುವವನೆ ಭೂಮಿಯ ಒಡೆಯ ಯೋಜನೆ ಜಾರಿಗೆ ತಂದರು ಎಂದು ತಿಳಿಸಿದರು.

ರಾಜೀವ್ ಗಾಂಧಿ ಅವರು ಜಾರಿಗೆ ತಂದ ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಮೀಸಲಾತಿಯಿಂದ ಬಹುತೇಕರಿಗೆ ಅಧಿಕಾರ ದೊರೆಯುವಂತಾಗಿದೆ. ತಾಂತ್ರಿಕ ಜಗತ್ತಿನಲ್ಲಿ ಸವಾಲು ಎಂಬಂತೆ ನಮ್ಮ ದೇಶವನ್ನು ರೂಪಿಸಿದವರು ರಾಜೀವ್ ಗಾಂಧಿ. ಅವರನ್ನು ಈ ದೇಶದ ಜನ ಮರೆಯಬಾರದು. ಹಾಗೇಯೇ ದೇವರಾಜ ಅರಸು ಕೂಡ ಜನಪರವಾದ ದಿಟ್ಟ ಆಡಳಿತ ನೀಡಿದ್ದರು ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಮುಖಂಡ ಎಂ.ಎಲ್.ಮೂರ್ತಿ, ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಡಿ.ಸಿ.ಪುಟ್ಟೇಗೌಡ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ನಗರಸಭೆ ಸದಸ್ಯ ಪರಮೇಶ್‌ ರಾಜ್ ಅರಸ್, ಜಿಲ್ಲಾ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಮಲ್ಲೇಶ್, ನಗರ ಆಶ್ರಯ ಸಮಿತಿ ಸದಸ್ಯ ಪ್ರಸಾದ್ ಅಮಿನ್, ಸಿಡಿಎ ಸದಸ್ಯ ಶೃದೀಪ್, ಮುಖಂಡರಾದ ಸೈಯದ್ ಹನೀಫ್, ಹಿರೇಮಗಳೂರು ರಾಮಚಂದ್ರ, ಜಯರಾಜ್ ಅರಸ್, ಶಿವರಾಂ, ನಾಗೇಶ್ ರಾಜ್ ಅರಸ್, ನಾಗೇಶ್, ಎಚ್.ಎಸ್.ಜಗದೀಶ್, ಸುನೀಲ್, ಸುರೇಶಕುಮಾರ್, ರಾಕೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.